ಗುರುವಾರ , ಜೂನ್ 17, 2021
29 °C

ಎಚ್‌ಡಿಎಫ್‌ಸಿ ಲಾಭಾಂಶ ಗಳಿಕೆ ಶೇ 10ರಷ್ಟು ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಎಚ್‌ಡಿಎಫ್‌ಸಿ ಲಿಮಿಟೆಡ್‌

ನವದೆಹಲಿ: ಹೌಸಿಂಗ್‌ ಫೈನಾನ್ಸ್‌ ಸಂಸ್ಥೆ ಎಚ್‌ಡಿಎಫ್‌ಸಿ ಲಿಮಿಟೆಡ್‌ ನಾಲ್ಕನೇ ತ್ರೈಮಾಸಿಕ ಲಾಭಾಂಶ ವರದಿ ಪ್ರಕಟಿಸಿದ್ದು, ಲಾಭಾಂಶ ಶೇ 10ರಷ್ಟು ಇಳಿಕೆಯೊಂದಿಗೆ ₹4,341.58 ಕೋಟಿ ದಾಖಲಾಗಿರುವುದಾಗಿ ಹೇಳಿದೆ. 

2018–19ನೇ ಸಾಲಿನ ಜನವರಿ–ಮಾರ್ಚ್‌ನಲ್ಲಿ ಎಚ್‌ಡಿಎಫ್‌ಸಿ ಒಟ್ಟು ಲಾಭಾಂಶ ₹4,811.26 ಕೋಟಿ ದಾಖಲಿಸಿತ್ತು. ಷೇರುದಾರರಿಗೆ ಸಂಸ್ಥೆಯು ₹2 ಮುಖ ಬೆಲೆಯ ಪ್ರತಿ ಷೇರಿಗೆ ₹21 ಲಾಭಾಂಶ ಪ್ರಕಟಿಸಿದೆ. 

ಪ್ರತ್ಯೇಕವಾಗಿ ಎಚ್‌ಡಿಎಫ್‌ಸಿ ಲಾಭಾಂಶ ಕಳೆದ ತ್ರೈಮಾಸಿಕದಲ್ಲಿ ಶೇ 22ರಷ್ಟು ಕಡಿಮೆಯಾಗಿ ₹2,232.55 ಕೋಟಿ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ₹2,861.58 ಕೊಟಿ ಲಾಭಾಂಶ ಗಳಿಕೆಯಾಗಿತ್ತು. 

2020ರ ಮಾರ್ಚ್‌ 31ರ ವರೆಗೂ ವಸೂಲಾಗದ ಸಾಲದ ಪ್ರಮಾಣ ₹8,908 ಕೋಟಿ ತಲುಪಿದೆ. ಇದು ಒಟ್ಟು ಸಾಲ ನೀಡಿಕೆಯಲ್ಲಿ ವಸೂಲಾಗದ ಸಾಲ ಶೇ 1.99ರಷ್ಟು ಪಾಲು ಹೊಂದಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು