ಬುಧವಾರ, ಮೇ 18, 2022
28 °C

ಹೀರೊ ಎಲೆಕ್ಟ್ರಿಕ್‌–ಮಹೀಂದ್ರ ಸಮೂಹ ಒಪ್ಪಂದ

ಪಿಟಿಐ Updated:

ಅಕ್ಷರ ಗಾತ್ರ : | |

ಹೀರೊ ಎಲೆಕ್ಟ್ರಿಕ್‌ ಸ್ಕೂಟರ್‌

ನವದೆಹಲಿ: ವಿದ್ಯುತ್ ಚಾಲಿತ ವಾಹನ ವಿಭಾಗಕ್ಕೆ ಸಂಬಂಧಿಸಿದಂತೆ ಹೀರೊ ಎಲೆಕ್ಟ್ರಿಕ್ ಮತ್ತು ಮಹೀಂದ್ರ ಸಮೂಹ ಒಪ್ಪಂದ ಮಾಡಿಕೊಂಡಿವೆ.

ಈ ಒಪ್ಪಂದದ ಪ್ರಕಾರ, ಹೀರೊ ಎಲೆಕ್ಟ್ರಿಕ್‌ನ ಅತ್ಯಂತ ಜನಪ್ರಿಯ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಾದ ಆಪ್ಟಿಮಾ ಮತ್ತು ಎನ್‌ವೈಎಕ್ಸ್‌ಅನ್ನು ಮಹೀಂದ್ರ ಸಮೂಹವು ಪೀತಮಪುರದಲ್ಲಿ ಇರುವ ತನ್ನ ಘಟಕದಲ್ಲಿ ತಯಾರಿಸಲಿದೆ. ಈ ಕುರಿತು ಎರಡೂ ಕಂಪನಿಗಳು ಜಂಟಿ ಹೇಳಿಕೆ ನೀಡಿವೆ.

ಈ ಸಹಭಾಗಿತ್ವದಿಂದ ಹೀರೊ ಎಲೆಕ್ಟ್ರಿಕ್‌ನ ಲುಧಿಯಾನದಲ್ಲಿ ಇರುವ ಘಟಕದ ವಿಸ್ತರಣೆ ಅನುಕೂಲ ಆಗಲಿದೆ. ಅಲ್ಲದೆ, 2022ರ ಒಳಗಾಗಿ ಪ್ರತಿ ವರ್ಷ 10 ಲಕ್ಷ ವಾಹನಗಳ ತಯಾರಿಕೆ ಮಾಡಲು ಸಹ ನೆರವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು