ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವರ್ಷ ಇ.ವಿ. ಮಾರುಕಟ್ಟೆಗೆ ಹೀರೊ

Last Updated 16 ಮೇ 2021, 13:07 IST
ಅಕ್ಷರ ಗಾತ್ರ

ನವದೆಹಲಿ: ದ್ವಿಚಕ್ರ ವಾಹನ ತಯಾರಿಕಾ ವಲಯದ ಪ್ರಮುಖ ಕಂಪನಿಯಾದ ಹೀರೊ ಮೊಟೊಕಾರ್ಪ್‌, ವಿದ್ಯುತ್‌ ಚಾಲಿತ ವಾಹನ (ಇ.ವಿ.) ಮಾರುಕಟ್ಟೆಗೆ ಮುಂದಿನ ವರ್ಷ ಪ್ರವೇಶಿಸುವುದಾಗಿ ತಿಳಿಸಿದೆ.

2022–23ನೇ ಹಣಕಾಸು ವರ್ಷದಲ್ಲಿ ವಿದ್ಯುತ್ ಚಾಲಿತ ವಾಹನ ಬಿಡುಗಡೆ ಮಾಡುವ ಪ್ರಯತ್ನದಲ್ಲಿದ್ದೇವೆ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ನಿರಂಜನ್‌ ಗುಪ್ತಾ ತಿಳಿಸಿದ್ದಾರೆ.

ಫಿಕ್ಸೆಡ್‌ ಚಾರ್ಜಿಂಗ್‌ ವ್ಯವಸ್ಥೆಯ ಆಧಾರದ ಮೇಲೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಜರ್ಮನಿ ಮತ್ತು ಜೈಪುರದಲ್ಲಿನ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಕೆಲಸ ಮಾಡುತ್ತಿವೆ ಎಂದು ಗುಪ್ತಾ ಮಾಹಿತಿ ನೀಡಿದ್ದಾರೆ.

ತೈವಾನ್‌ನ ಗೊಗೊರೊ ಕಂಪನಿಯ ಜೊತೆಗಿನ ಪಾಲುದಾರಿಕೆಯಲ್ಲಿ ಬ್ಯಾಟರಿ ಸ್ವಾಪಿಂಗ್‌ ವ್ಯವಸ್ಥೆಯತ್ತ ಗಮನ ಹರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿದ್ಯುತ್ ಚಾಲಿತ ವಾಹನ ಮಾರುಕಟ್ಟೆಯ ಬೆಳವಣಿಗೆಯ ಪ್ರಯೋಜನ ಪಡೆಯಲು ಕಂಪನಿಯು ಈಗಾಗಲೇ ಬೆಂಗಳೂರಿನ ನವೋದ್ಯಮ ‘ಏಥರ್ ಎನರ್ಜಿ’ ಕಂಪನಿಯಲ್ಲಿ ಹೂಡಿಕೆ ಮಾಡಿದೆ. ಏಥರ್ ಎನರ್ಜಿ ಕಂಪನಿಯ ಇ–ಸ್ಕೂಟರ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT