ಜೈಪುರ: ಹೀರೊ ಮೊಟೊಕಾರ್ಪ್ ಕಂಪನಿಯು ತನ್ನ ಮೊದಲ ವಿದ್ಯುತ್ ಚಾಲಿತ ಸ್ಕೂಟರ್ ‘ವಿಡಾ ವಿ1’ ಬಿಡುಗಡೆ ಮಾಡಿದೆ.

ವಿಡಾ ವಿ1 ಪ್ಲಸ್ ಮತ್ತು ವಿಡಾ ವಿ1 ಪ್ರೊ ಎಂಬ ಎರಡು ಅವತರಣಿಕೆಗಳನ್ನು ನೀಡಿದ್ದು, ಬೆಲೆಯು ಕ್ರಮವಾಗಿ ₹1.45 ಲಕ್ಷ ಮತ್ತು ₹1.59 ಲಕ್ಷ ಇದೆ. ಒಮ್ಮೆ ಚಾರ್ಜ್ ಮಾಡಿದರೆ ವಿಡಾ 1 ಪ್ಲಸ್ 143 ಕಿಲೋ ಮೀಟರ್ ಮತ್ತು ವಿ1 ಪ್ರೊ 165 ಕಿಲೋ ಮೀಟರ್ವರೆಗೆ ಚಲಾಯಿಸಬಹುದು ಎಂದು ಕಂಪನಿಯು ತಿಳಿಸಿದೆ.

ಮೊದಲಿಗೆ ಬೆಂಗಳೂರು, ದೆಹಲಿ, ಜೈಪುರದಲ್ಲಿ ಮಾರಾಟ ಆರಂಭ ಆಗಲಿದೆ. ಬಳಿಕ ಇತರೆ ಸ್ಥಳಗಳಲ್ಲಿಯೂ ಮಾರಾಟ ಮಾಡಲಾಗುವುದು ಎಂದು ಕಂಪನಿಯು ತಿಳಿಸಿದೆ.

ಇದೇ ತಿಂಗಳ 10ರಿಂದ ಬುಕಿಂಗ್ ಆರಂಭ ಆಗಲಿದ್ದು, ಡಿಸೆಂಬರ್ ತಿಂಗಳ ಎರಡನೇ ವಾರದಿಂದ ವಿತರಣೆ ಆರಂಭ ಆಗಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.