ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ಕ್ಯಾಪಿಟಲ್‌ ಸ್ವಾಧೀನ: ಬಿಡ್‌ ಮೊತ್ತ ಹೆಚ್ಚಿಸಿದ ಹಿಂದುಜಾ

Last Updated 24 ಡಿಸೆಂಬರ್ 2022, 22:30 IST
ಅಕ್ಷರ ಗಾತ್ರ

ನವದೆಹಲಿ: ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್ ಕ್ಯಾಪಿಟಲ್‌ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಹಿಂದುಜಾ ಸಮೂಹವು ತನ್ನ ಬಿಡ್‌ ಮೊತ್ತವನ್ನು ₹9,500 ಕೋಟಿಗೆ ಹೆಚ್ಚಿಸಲಿದೆ ಎಂದು ಮೂಲಗಳು ಹೇಳಿವೆ. ಆದರೆ, ಈ ಕುರಿತು ಸಮೂಹವು ಪ್ರತಿಕ್ರಿಯೆ ನೀಡಿಲ್ಲ.

ಇದೇ 21ರಂದು ನಡೆದಿದ್ದ ಮೊದಲ ಹಂತದ ಹರಾಜಿನಲ್ಲಿ ಅಹಮದಾಬಾದ್‌ನ ಟೊರೆಂಟ್‌ ಸಮೂಹವು ₹8,640 ಕೋಟಿ ಮೊತ್ತದ ಬಿಡ್‌ ಸಲ್ಲಿಸಿತ್ತು. ಹಿಂದುಜಾ ಸಮೂಹವು ₹8,110 ಕೋಟಿ ಮೊತ್ತಕ್ಕೆ ಖರೀದಿ ಮಾಡುವುದಾಗಿ ಹೇಳಿತ್ತು. ಆದರೆ, ಇದೀಗ ತನ್ನ ಬಿಡ್‌ ಮೊತ್ತವನ್ನು ಬದಲಾಯಿಸಲು ಮುಂದಾಗಿದೆ. ಸಲ್ಲಿಕೆ ಆಗಿರುವ ಬಿಡ್‌ಗಳ ಪರಿಶೀಲನೆ ನಡೆಸಲು ಸಾಲ ನೀಡಿರುವ ಕಂಪನಿಗಳು ಸೋಮವಾರ ಸಭೆ ಸೇರಲಿವೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಳಿಯ (ಎನ್‌ಸಿಎಲ್‌ಟಿ) ಆದೇಶದ ಪ್ರಕಾರ, 2023ರ ಜನವರಿ 31ರ ಒಳಗಾಗಿ ದಿವಾಳಿ ಪ್ರಕ್ರಿಯೆ ಪೂರ್ನಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT