ಗುರುವಾರ , ಅಕ್ಟೋಬರ್ 1, 2020
22 °C

ಉದ್ಯೋಗ ನೇಮಕಾತಿ: ನಿರಾಶಾದಾಯಕ ವಾತಾವರಣ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಉದ್ಯೋಗಕ್ಕೆ ಹೊಸಬರನ್ನು ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಭಾರತದಲ್ಲಿನ ಈಗಿನ ವಾತಾವರಣವು ಕಳೆದ 15 ವರ್ಷಗಳಲ್ಲಿ ಅತ್ಯಂತ ನಿರಾಶಾದಾಯಕವಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಈ ಸಮೀಕ್ಷೆಯು ಒಟ್ಟು 813 ಕಂಪನಿಗಳಿಂದ ಮಾಹಿತಿ ಸಂಗ್ರಹಿಸಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಕಂಪನಿಗಳ ಪೈಕಿ ಶೇಕಡ 7ರಷ್ಟು ಮಾತ್ರ ವೇತನದಲ್ಲಿ ಹೆಚ್ಚಳ ಆಗಬಹುದು ಎಂದು ಹೇಳಿವೆ. ಶೇ 3ರಷ್ಟು ಕಂಪನಿಗಳು, ವೇತನದಲ್ಲಿ ಇಳಿಕೆ ಆಗಬಹುದು ಎಂದಿವೆ. ಶೇ 54ರಷ್ಟು ಕಂಪನಿಗಳು ವೇತನದಲ್ಲಿ ಬದಲಾವಣೆ ಆಗಲಿಕ್ಕಿಲ್ಲ ಎಂದಿವೆ. 

ಅತಿಹೆಚ್ಚಿನ ನೇಮಕಾತಿಗಳು ನಡೆಯುತ್ತಿರುವುದು ಸಣ್ಣ ಪ್ರಮಾಣದ ಸಂಸ್ಥೆಗಳಲ್ಲಿ. ಮಧ್ಯಮ ಹಾಗೂ ದೊಡ್ಡ ಪ್ರಮಾಣದ ಸಂಸ್ಥೆಗಳಲ್ಲಿನ ನೇಮಕಾತಿ ಚಟುವಟಿಕೆಗಳು ನಂತರದ ಸ್ಥಾನದಲ್ಲಿವೆ. ಉತ್ತರ ಹಾಗೂ ಪೂರ್ವ ಭಾಗದಲ್ಲಿ ನೇಮಕಾತಿ ವಿಚಾರದಲ್ಲಿ ಆಶಾದಾಯಕ ವಾತಾವರಣ ಇದೆ. ಆದರೆ, ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಅಷ್ಟೊಂದು ಆಶಾದಾಯಕ ವಾತಾವರಣ ಇಲ್ಲ ಎಂದು ಮ್ಯಾನ್‌ಪವರ್ ಗ್ರೂಪ್‌ ನಡೆಸಿದ ಸಮೀಕ್ಷೆ ಹೇಳಿದೆ.

ನೇಮಕಾತಿ ವಿಚಾರದಲ್ಲಿ ತಾವು ಕೋವಿಡ್‌–19 ಪೂರ್ವದ ಸ್ಥಿತಿಗೆ ಇನ್ನು ಒಂಬತ್ತು ತಿಂಗಳಲ್ಲಿ ಮರಳಬಹುದು ಎಂದು ಶೇ 44ರಷ್ಟು ಸಂಸ್ಥೆಗಳು ಭಾವಿಸಿವೆ. ಶೇ 42ರಷ್ಟು ಸಂಸ್ಥೆಗಳು ನೇಮಕಾತಿ ವಿಚಾರದಲ್ಲಿ ತಾವು ಕೋವಿಡ್‌–19 ಪೂರ್ವದ ಸ್ಥಿತಿಗೆ ಮರುಳುತ್ತೇವೆ ಎಂಬ ಖಚಿತ ಭರವಸೆ ಹೊಂದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು