ನವದೆಹಲಿ: ಹೋಂಡಾ ಮೋಟರ್ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ (ಎಚ್ಎಂಎಸ್ಐ) ಕಂಪನಿಯು ದೇಶದ ಮಾರುಕಟ್ಟೆಗೆ ಬಿಎಸ್6ಗೆ ಪೂರಕವಾದ ಗ್ರಾಜಿಯಾ 125 ಸ್ಕೂಟರ್ ಬಿಡುಗಡೆ ಮಾಡಿದೆ.

ಗುರುಗ್ರಾಮದಲ್ಲಿ ಇದರಎಕ್ಸ್ಷೋರೂಂ ಬೆಲೆ ₹ 73,336ರಿಂದ ಆರಂಭವಾಗಲಿದೆ.ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಅವತರಣಿಕೆಯಲ್ಲಿ ಲಭ್ಯವಿದ್ದು, ಆರು ವರ್ಷಗಳ ವಿಶೇಷ ವಾರಂಟಿ ಪ್ಯಾಕೇಜ್ ಇದೆ.

‘ಹೊಸ ಗ್ರಾಜಿಯಾ, ಸವಾರರಿಗೆ ಸಂಪೂರ್ಣವಾಗಿ ಹೊಸ ಸಂಚಾರ ಅನುಭವ ಒದಗಿಸಲಿದೆ. ಜಾಗತಿಕವಾಗಿ ಮೆಚ್ಚುಗೆಗೆ ಒಳಗಾಗಿರುವ ಇಎಸ್ಪಿ ತಂತ್ರಜ್ಞಾನ, ಹೊಸ ವೈಶಿಷ್ಟ್ಯಗಳು ಮತ್ತು ಆಕರ್ಷಕ ಶೈಲಿಯು ಇದನ್ನು ‘ಸ್ಟನ್ನಿಂಗ್ ಜೀನಿಯಸ್’ ಆಗಿ ರೂಪಿಸಿದೆ’ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ನಿರ್ದೇಶಕ ಯದುವೀಂದರ್ ಸಿಂಗ್ ಗುಲೇರಿಯಾ ತಿಳಿಸಿದ್ದಾರೆ.

ಘರ್ಷಣೆ ಕಡಿಮೆ: ಆಫ್ಸೆಟ್ ಸಿಲಿಂಡರ್ ಮತ್ತು ಕಾಂಪ್ಯಾಕ್ಟ್ ವೆಯ್ಟ್ ಕ್ರ್ಯಾಂಕ್ ಶಿಫ್ಟ್ ಪಿಸ್ಟನ್ ಒಟ್ಟಾರೆ ಎಂಜಿನ್ ಘರ್ಷಣೆಯನ್ನು ಕಡಿಮೆ ಮಾಡುತ್ತದೆ. ಪಿಸ್ಟನ್ ಕೂಲಿಂಗ್ ಜೆಟ್ ವ್ಯವಸ್ಥೆಯು ತಂಪಾಗಿಸುವಿಕೆಯನ್ನು ಹೆಚ್ಚಿಸುತ್ತದೆ ಹಾಗೂ ಎಂಜಿನ್ ಉಷ್ಣತೆ ಕಾಪಾಡುತ್ತದೆ.

ಹೊಚ್ಚ ಹೊಸ ಗ್ರಾಜಿಯಾ 125ನಲ್ಲಿ ವಿಶೇಷ ಐಡ್ಲಿಂಗ್ ಸ್ಟಾಪ್ ಸಿಸ್ಟಮ್ ಇರುತ್ತದೆ. ಇದು ಟ್ರಾಫಿಕ್ ಲೈಟ್ ಮತ್ತು ಇತರ ಅಲ್ಪ ನಿಲುಗಡೆಯ ವೇಳೆ ಸ್ವಯಂಚಾಲಿತವಾಗಿ ಎಂಜಿನ್ ಆಫ್ ಮಾಡುತ್ತದೆ ಹಾಗೂ ಅನಗತ್ಯವಾಗಿ ಇಂಧನ ಬಳಕೆ ತಡೆಯುತ್ತದೆ. ಈ ಮೂಲಕ ಹೊಗೆ ಹೊರಸೂಸುವಿಕೆಯೂ ಕನಿಷ್ಠ ಪ್ರಮಾಣದಲ್ಲಿ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.