ಡ್ರೈವ್‌ಜೀ ಜೊತೆ ಹೋಂಡಾ ಒಪ್ಪಂದ

7

ಡ್ರೈವ್‌ಜೀ ಜೊತೆ ಹೋಂಡಾ ಒಪ್ಪಂದ

Published:
Updated:
Deccan Herald

ಬೆಂಗಳೂರು: ವಾಹನಗಳನ್ನು ಬಾಡಿಗೆಗೆ ಒದಗಿಸುವ ಡ್ರೈವ್‌ಜೀ ಸಂಸ್ಥೆ ಜೊತೆ ವಾಹನ ತಯಾರಿಕಾ ಸಂಸ್ಥೆ ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ.

ಒಪ್ಪಂದದ ಅಂಗವಾಗಿ ಬೆಂಗಳೂರು ಮತ್ತು ಹೈದರಾಬಾದ್‌ ನಗರಗಳಲ್ಲಿನ ಪ್ರಯಾಣಿಕರ ಅನುಕೂಲಕ್ಕಾಗಿ 3 ಸಾವಿರ ಹೋಂಡಾ ಆ್ಯಕ್ಟಿವಾ 5ಜಿ ಮತ್ತು ಕ್ಲಿಕ್‌ ಸ್ಕೂಟರ್‌ಗಳನ್ನು ಒದಗಿಸಲಿದೆ.

‘ಡ್ರೈವ್‌ಜೀ ಸಂಸ್ಥೆ ನಮ್ಮ ವಾಹನಗಳ ಮೇಲೆ ವಿಶ್ವಾಸವಿಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೋಂಡಾದ ಹಿರಿಯ ಉಪಾಧ್ಯಕ್ಷ ಯದುವಿಂದರ್ ಸಿಂಗ್ ತಿಳಿಸಿದರು. 

‘ಭಾರತದಲ್ಲಿ ನಗರೀಕರಣ ಹೆಚ್ಚಾಗುತ್ತಿದೆ. ಆದರೆ ಸಮೂಹ ಸಾರಿಗೆ ಸೌಲಭ್ಯ ಕಡಿಮೆ ಇರುವುದರಿಂದ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ. ಹೀಗಾಗಿ ದ್ವಿಚಕ್ರ ವಾಹನಗಳನ್ನು ಬಳಸುವುದು ಸೂಕ್ತ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !