ಶನಿವಾರ, ಮಾರ್ಚ್ 25, 2023
24 °C

ಕೌಟುಂಬಿಕ ಸಾಲ ಹೆಚ್ಚಳ: ಅರ್‌ಬಿಐ ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕೋವಿಡ್‌–19 ಸಾಂಕ್ರಾಮಿಕದಿಂದಾಗಿ 2020-21ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕೌಟುಂಬಿಕ ಸಾಲದ ಪ್ರಮಾಣವು ದೇಶದ ಜಿಡಿಪಿಯ ಶೇಕಡ 37.1ಕ್ಕೆ ಏರಿಕೆ ಆಗಿದೆ ಎಂದು ಅರ್‌ಬಿಐ ವರದಿ ತಿಳಿಸಿದೆ.

ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 21ರಷ್ಟಿದ್ದ ಕೌಟುಂಬಿಕ ಉಳಿತಾಯವು ಎರಡನೇ ತ್ರೈಮಾಸಿಕದಲ್ಲಿ ಶೇ 10.4ಕ್ಕೆ ಇಳಿಕೆಯಾಗಿದೆ. ಹೀಗಿದ್ದರೂ 2019–20ರ ಎರಡನೇ ತ್ರೈಮಾಸಿಕದಲ್ಲಿದ್ದ ಶೇ 9.8ರಷ್ಟಕ್ಕಿಂತಲೂ ಹೆಚ್ಚಿಗೆ ಇದೆ.

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಉದ್ಯೋಗ ನಷ್ಟ ಉಂಟಾಗಿದೆ. ಬಹುತೇಕ ಎಲ್ಲ ವಲಯಗಳ ನೌಕರರ ವೇತನದಲ್ಲಿ ಕಡಿತ ಆಗಿದೆ. ಇದರಿಂದಾಗಿ ಹೆಚ್ಚು ಸಾಲ ಪಡೆಯುವಂತೆ ಅಥವಾ ವೆಚ್ಚಗಳನ್ನು ಪೂರೈಸಲು ಉಳಿತಾಯ ಮಾಡಿದ್ದನ್ನು ಖರ್ಚು ಮಾಡುವಂತೆ ಆಗಿದೆ ಎಂದು ವರದಿ ಹೇಳಿದೆ.

ಮೂರನೇ ತ್ರೈಮಾಸಿಕದಲ್ಲಿ ಕೌಟುಂಬಿಕ ಉಳಿತಾಯದ ಪ್ರಮಾಣವು ಇನ್ನಷ್ಟು ಇಳಿಕೆ ಕಾಣುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಕೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು