ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಮಾರಾಟ ಇಳಿಕೆ

Last Updated 7 ಅಕ್ಟೋಬರ್ 2020, 13:44 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್‌ ನಿಯಮಗಳಲ್ಲಿ ಸಡಿಲಿಕೆ ತರುತ್ತಿರುವುದರ ಜೊತೆಯಲ್ಲೇ ದೇಶದಲ್ಲಿ ವಸತಿ ಬೇಡಿಕೆ ಚೇತರಿಕೆ ಕಾಣುತ್ತಿದೆ. ಹೀಗಿದ್ದರೂ ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಪ್ರಮುಖ ಏಳು ನಗರಗಳಲ್ಲಿ ವಸತಿ ಮಾರಾಟವು ಶೇಕಡ 35ರಷ್ಟು ಇಳಿಕೆಯಾಗಿದೆ ಎಂದು ಪ್ರಾಪ್‌ ಈಕ್ವಿಟಿ ಸಂಸ್ಥೆ ತಿಳಿಸಿದೆ.

ಬೆಂಗಳೂರು, ದೆಹಲಿ ರಾಜಧಾನಿ ಪ್ರದೇಶ, ಮುಂಬೈ ಮೆಟ್ರೊಪಾಲಿಟನ್ ಪ್ರದೇಶ, ಚೆನ್ನೈ, ಕೋಲ್ಕತ್ತ, ಹೈದರಾಬಾದ್‌ ಮತ್ತು ಪುಣೆ ನಗರಗಳಲ್ಲಿ 2019ರ ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ 78,472 ಯೂನಿಟ್‌ಗಳು‌ ಮಾರಾಟವಾಗಿದ್ದವು. 2020ರ ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ ಮಾರಾಟವಾದ ಯೂನಿಟ್‌ಗಳ ಸಂಖ್ಯೆ 50,983 ಮಾತ್ರ ಎಂದು ಅದು ತಿಳಿಸಿದೆ.

ಈ ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ 24,936 ಯೂನಿಟ್‌ಗಳು ಮಾರಾಟವಾಗಿದ್ದವು. ಈ ಅವಧಿಯಲ್ಲಿನ ಮಾರಾಟಕ್ಕೆ ಹೋಲಿಸಿದರೆ ಜುಲೈ–ಸೆಪ್ಟೆಂಬರ್‌ನಲ್ಲಿ ಮಾರಾಟವು ಎರಡುಪಟ್ಟು ಹೆಚ್ಚಾಗಿದೆ.

‘ದೇಶದ ರಿಯಲ್‌ ಎಸ್ಟೇಟ್‌ ವಲಯವು ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡುಕೊಳ್ಳುತ್ತಿದೆ. ಹಿಂದಿನ ತ್ರೈಮಾಸಿಕದಲ್ಲಿ ಹೊಸ ಯೋಜನೆಗಳು ಜಾರಿಗೆ ಬಂದಿವೆ. ವಸತಿ ನಿರ್ಮಾಣಗಾರರು ಖಾಲಿ ಇರುವ ಯೂನಿಟ್‌ಗಳನ್ನು ಮಾರಾಟ ಮಾಡಲು ವಿವಿಧ ಯೋಜನೆಗಳು ಮತ್ತು ಕೊಡುಗೆಗಳನ್ನು ನೀಡುತ್ತಿದ್ದಾರೆ’ ಎಂದು ಪ್ರಾಪ್‌ ಈಕ್ವಿಟಿ ಸಂಸ್ಥೆಯ ಸಹ ಸ್ಥಾಪಕ ಸಮೀರ್‌ ಜಸುಜಾ ತಿಳಿಸಿದ್ದಾರೆ.

‘ಹಬ್ಬಗಳ ಅವಧಿ ಆರಂಭವಾಗುತ್ತಿದ್ದು, ಗ್ರಾಹಕರನ್ನು ಆಕರ್ಷಿಸಲು ಇನ್ನೂ ಹೆಚ್ಚಿನ ಕೊಡುಗೆಗಳು, ವಿನಾಯಿತಿ ಮತ್ತು ಆಕರ್ಷಕ ಪಾವತಿ ಯೋಜನೆಗಳನ್ನು ನೀಡಲಾಗುವುದು. ಇದರಿಂದಾಗಿ ವಲಯದ ಚೇತರಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ’ ಎಂದೂ ಅವರು ಹೇಳಿದ್ದಾರೆ.

ನಗರವಾರು ಇಳಿಕೆ

ಬೆಂಗಳೂರು;44%

ಕೋಲ್ಕತ್ತ;44%

ಪುಟಣೆ;44%

ಚೆನ್ನೈ;36%

ಹೈದರಾಬಾದ್;32%

ಮುಂಬೈ ಮೆಟ್ರೊಪಾಲಿಟನ್ ಪ್ರದೇಶ;30%

ದೆಹಲಿ ರಾಜಧಾನಿ ಪ್ರದೇಶ;23%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT