ಗುರುವಾರ , ಫೆಬ್ರವರಿ 20, 2020
19 °C

ವಸತಿ ಮಾರಾಟ ಶೇ 4ರಷ್ಟು ಅಲ್ಪ ಹೆಚ್ಚಳ: ಆನಾರ್ಕ್ ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ಪ್ರಮುಖ 7 ನಗರಗಳಲ್ಲಿ 2019ರಲ್ಲಿ ವಸತಿ ಮಾರಾಟವು ಶೇ 4ರಷ್ಟು ಅಲ್ಪ ಏರಿಕೆ ಕಾಣುವ ಅಂದಾಜು ಮಾಡಲಾಗಿದೆ ಎಂದು ಆಸ್ತಿ ದಲ್ಲಾಳಿ ಸಂಸ್ಥೆ ಆನಾರ್ಕ್‌ ಹೇಳಿದೆ.

2019ಕ್ಕೆ ಒಟ್ಟಾರೆ ಮಾರಾಟ 2.58 ಲಕ್ಷದಷ್ಟಾಗುವ ಅಂದಾಜು ಮಾಡಿದೆ. 2018ರಲ್ಲಿ 2.48 ಲಕ್ಷ ವಸತಿಗಳು ಮಾರಾಟವಾಗಿದ್ದವು.

ನಗದು ಕೊರತೆಯಿಂದ ಬೇಡಿಕೆ ಕುಸಿದಿದ್ದು, ಒಟ್ಟಾರೆ ಆರ್ಥಿಕತೆಯೇ ಮಂದಗತಿಯ ಬೆಳವಣಿಗೆಯಲ್ಲಿದೆ. ಹೀಗಾಗಿ ವಸತಿ ಮಾರಾಟವೂ ಹೆಚ್ಚಿನ ಪ್ರಗತಿ ಕಾಣುವುದಿಲ್ಲ ಎಂದಿದೆ.

ಬೆಂಗಳೂರು, ಮುಂಬೈ ಮಹಾನಗರ ಪ್ರದೇಶ (ಎಂಎಂಆರ್‌), ದೆಹಲಿ ರಾಜಧಾನಿ ಪ್ರದೇಶ (ಎನ್‌ಸಿಆರ್‌), ಪುಣೆ, ಹೈದರಾಬಾದ್‌, ಚೆನ್ನೈ ಮತ್ತು ಕೋಲ್ಕತ್ತದಲ್ಲಿ, ಕ್ಯಾಲೆಂಡರ್ ವರ್ಷದ ಮೊದಲಾರ್ಧದಲ್ಲಿ ಮಾರಾಟ ಉತ್ತಮವಾಗಿತ್ತು. ಆದರೆ, ಮೂರನೇ ತ್ರೈಮಾಸಿಕದಲ್ಲಿ ಬೇಡಿಕೆ ಕುಸಿದಿದೆ.

ಕೇಂದ್ರ ಸರ್ಕಾರದ ಉತ್ತೇಜನಾ ಕ್ರಮಗಳಿಂದಾಗಿ 2019ರಲ್ಲಿ ಕೈಗೆಟುಕುವ ದರದ ಮನೆಗಳ ಬೇಡಿಕೆಯು ಉತ್ತಮವಾಗಿದೆ. ಅರ್ಧಕ್ಕೆ ನಿಂತಿರುವ ಕೈಗೆಟುಕುವ ದರದ ಯೋಜನೆಗಳನ್ನು ಪೂರ್ಣಗೊಳಿಸಲು ₹25 ಸಾವಿರ ಕೋಟಿ ಮೊತ್ತದ ಪರ್ಯಾಯ ಹೂಡಿಕೆ ನಿಧಿಯನ್ನು ಘೋಷಿಸಿಲಾಗಿದೆ. ಇದರಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ.

ಲಕ್ಷುರಿ ಮತ್ತು ಅಲ್ಟ್ರಾ ಲಕ್ಷುರಿ ವಿಭಾಗಗಳಲ್ಲಿ ಹೆಚ್ಚಿನ ಹೂಡಿಕೆ ಚಟುವಟಿಕೆ ಕಂಡುಬಂದಿಲ್ಲ ಎಂದು ಹೇಳಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು