ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಉಳಿಸಿ, ಸಂಪತ್ತು ಗಳಿಸಿ!

Last Updated 21 ಜನವರಿ 2020, 19:30 IST
ಅಕ್ಷರ ಗಾತ್ರ

ಉಳಿತಾಯದ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಲಾಭಕರವಾಗಲಿದೆ. ಇದರಿಂದ ಆಗುವ ಸಂಪತ್ತಿನ ಗಳಿಕೆ ಊಹಾತೀತ ಎಂಬುದಕ್ಕೆ ಇಲ್ಲೊಂದು ನಿದರ್ಶನ ಇದೆ. 1978ರ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಮುಂಬೈ ಷೇರುಪೇಟೆಯಲ್ಲಿ ₹ 1 ಲಕ್ಷ ಹೂಡಿಕೆ ಮಾಡಿದ್ದರೆ, ಇದರ ಮೌಲ್ಯ 2019ರ ಅಂತ್ಯದ ವೇಳೆಗೆ ₹ 4.04 ಕೋಟಿ ಆಗುತ್ತಿತ್ತು!.ಈ41 ವರ್ಷಗಳಲ್ಲಿ ಹೂಡಿಕೆಯ ಒಟ್ಟಾರೆ ವಾರ್ಷಿಕ ಬೆಳವಣಿಗೆಯ ದರ ಶೇ 16ರಷ್ಟು ಆಗಿದೆ.

ದೀರ್ಘಾವಧಿ ಹಣಕಾಸು ಗುರಿಗಳನ್ನು ವ್ಯಕ್ತಿಯು ಹೊಂದಿದ್ದರೆ ಷೇರುಗಳಲ್ಲಿ ಹೂಡಿಕೆ ಮಾಡುವುದು ಒಳಿತು ಎಂಬುದನ್ನು ಇದು ಸೂಚಿಸುತ್ತದೆ. ವ್ಯಕ್ತಿಯ ಹಣಕಾಸು ಗುರಿಗಳನ್ನು ಅವನ ನಿವೃತ್ತಿ ಜೀವನ, ಮಕ್ಕಳ ಶಿಕ್ಷಣ ಇವೇ ಮೊದಲಾದವು ಪ್ರಭಾವಿಸುತ್ತವೆ ಎಂಬುದನ್ನು ಗಮನದಲ್ಲಿಡಬೇಕಾದ ಸಂಗತಿಯಾಗಿದೆ.

ತೆರಿಗೆದಾರರು ಷೇರು ಆಧಾರಿತ ಉಳಿತಾಯ ಯೋಜನೆಗಳಲ್ಲಿ (equity linked savings scheme –ELSS)ತಮ್ಮ ಹಣ ಹೂಡಿಕೆ ಮಾಡಿದ್ದರೆ ಅದಕ್ಕೆ ತೆರಿಗೆ ವಿನಾಯ್ತಿ ಪಡೆಯುವುದಕ್ಕೆ ಆದಾಯ ತೆರಿಗೆ ಕಾನೂನುಗಳು ಖಾತರಿ ನೀಡುತ್ತವೆ. ಹೂಡಿಕೆಗೆ ವಾರ್ಷಿಕ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್‌ 80ರ ಅಡಿ ತೆರಿಗೆ ವಿನಾಯ್ತಿಯು ಗರಿಷ್ಠ ₹ 1.50 ಲಕ್ಷದವರೆಗೆ ಇದೆ. ಆದರೆ, ಇಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ ’ಲಾಕ್‌ ಇನ್‌’ ನಿರ್ಬಂಧ ಇರುತ್ತದೆ. ಅಂದರೆ ಮೂರು ವರ್ಷಗಳವರೆಗೆ ಈ ಹಣ ಹಿಂದಕ್ಕೆ ಪಡೆಯಲು ಬರುವುದಿಲ್ಲ. ಹೂಡಿಕೆಯಲ್ಲಿನ ಶೇ 65ರಷ್ಟು ಮೊತ್ತವನ್ನು ಷೇರುಗಳು ಮತ್ತು ಷೇರು ಸಂಬಂಧಿತ ಸೆಕ್ಯೂರಿಟೀಸ್‌ಗಳಲ್ಲಿ (ಇಇಎಸ್‌) ತೊಡಗಿಸಬೇಕಾಗುತ್ತದೆ.

ಸೆಕ್ಷನ್‌ 80ರ ಅಡಿಯಲ್ಲೇ ಬರುವಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌), ದೀರ್ಘಾವಧಿ ಠೇವಣಿ, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿಎಸ್‌) ಗಳಿಗೆ ಹೋಲಿಸಿದರೆ ‘ಇಎಲ್‌ಎಸ್‌ಎಸ್‌’ನ ಲಾಕ್‌ ಇನ್‌ ಅವಧಿ ಕಡಿಮೆ. ಇದರಿಂದಾಗಿಯೇ ಹೂಡಿಕೆದಾರರುತೆರಿಗೆ ಉಳಿತಾಯದ ಪ್ರಯೋಜನ ಪಡೆಯಲು ಮತ್ತು ಸಂಪತ್ತಿನ ಸೃಷ್ಟಿಗೆ‘ಇಎಲ್‌ಎಸ್‌ಎಸ್‌’ ಒಳ್ಳೆಯ ರಹದಾರಿ. ಇದರ ಜನಪ್ರಿಯತೆಯನ್ನು 1.23 ಕೋಟಿ ಹೂಡಿಕೆದಾರರ ಖಾತೆಗಳಿಂದಲೇ ನಾವು ಅಳೆಯಬಹುದು.

ಮ್ಯೂಚುವಲ್‌ ಫಂಡ್ಸ್‌ ಸಂಸ್ಥೆಯ (ಎಎಂಎಫ್‌ಐ) ಪ್ರಕಾರ, 2019ರ ನವೆಂಬರ್‌ ಅಂತ್ಯಕ್ಕೆ ₹ 1.03 ಕೋಟಿ ಮೊತ್ತವನ್ನು ‘ಇಎಲ್‌ಎಸ್‌ಎಸ್’ನಲ್ಲಿ ಹೂಡಿಕೆ ಮಾಡಲಾಗಿದೆ. ಇದು ಷೇರು ಖಾತೆಗಳಲ್ಲಿ ಶೇ 20 ರಷ್ಟು ಪಾಲು ಹೊಂದಿದೆ.

ಹೂಡಿಕೆದಾರರು ‘ಇಎಲ್‌ಎಸ್‌ಎಸ್’ನಲ್ಲಿ ವ್ಯವಸ್ಥಿಯ ಹೂಡಿಕೆ ಯೋಜನೆಯನ್ನೂ (ಎಸ್‌ಐಪಿ) ನೋಂದಾಯಿಸಬಹುದು. ಈ ಮೂಲಕ ತಮ್ಮ ತೆರಿಗೆ ಯೋಜನೆ ಮತ್ತು ಇತರ ಹಣಕಾಸು ಗುರಿಯತ್ತಲೂ ಸಮಂಜಸವಾಗಿ ಆಲೋಚಿಸಬಹುದಾಗಿದೆ. ಹೂಡಿಕೆಯನ್ನು ಮಧ್ಯದಲ್ಲಿಯೇ ವಾಪಸ್‌ ಪಡೆಯುವ ಆಲೋಚನೆಯನ್ನು ಮೂರು ವರ್ಷಗಳ ‘ಲಾಕ್‌ ಇನ್‌’ ಅವಧಿ ತಪ್ಪಿಸುತ್ತದೆ.

ಮಾರುಕಟ್ಟೆ ವಹಿವಾಟು ಏರಿಕೆ ಅಥವಾ ಇಳಿಕೆ ಗತಿಯಲ್ಲಿದ್ದಾಗಲೂ ‘ಇಎಲ್‌ಎಸ್‌ಎಸ್‌’ ಹೂಡಿಕೆದಾರರು ಹೂಡಿಕೆದಾರರಾಗಿಯೇ ಇರುತ್ತಾರೆ. ಇದಕ್ಕೆ ‘ಲಾಕ್‌ ಇನ್‌’ ವ್ಯವಸ್ಥೆಯೇ ಕಾರಣವಾಗಿದೆ. ಹೂಡಿಕೆಯ ಅವಧಿ ಮುಗಿದ ನಂತರ ತೆರಿಗೆ ಉಳಿತಾಯವೂ ಸೇರಿ ಗಳಿಸಿದ ಹಣವನ್ನು ‘ಇಎಲ್‌ಎಸ್‌ಎಸ್‌’ನಲ್ಲಿ ಮರು ಹೂಡಿಕೆ ಮಾಡಬಹುದು. ಈ ಮೂಲಕ ಹಣಕಾಸಿನ ಗುರಿಗಳನ್ನು ಸಾಧಿಸಲು ಇದರಲ್ಲಿಯೇ ಮುಂದುವರಿಯಬಹುದು.

ಮೂರು ವರ್ಷಗಳ ಕಡ್ಡಾಯ ‘ಲಾಕ್-ಇನ್’ ಅವಧಿಯ ಕಾರಣದಿಂದ ಹೂಡಿಕೆಯಿಂದ ಹಿಂದೆ ಸರಿಯುವ ಒತ್ತಡಗಳು ಕಡಿಮೆ ಇರುತ್ತವೆ. ಹೀಗಾಗಿ ದೀರ್ಘಾವಧಿ ಹೂಡಿಕೆಯ ಹೊಸ ಮಾರ್ಗಗಳು ಗೋಚರಿಸುತ್ತವೆ. 10 ವರ್ಷಗಳ ‘ಸಿಪ್‌’ (ಎಸ್‌ಐಪಿ) ಹೂಡಿಕೆ ಅವಧಿಯಲ್ಲಿಮುಂಬೈ ಷೇರುಪೇಟೆಯ ಸೆನ್ಸೆಕ್ಸ್‌ ಅನ್ನೂ ‘ಇಎಲ್‌ಎಸ್‌ಎಸ್‌’ ನಿಧಿಗಳು ಮೀರಿಸಿವೆ. 10 ವರ್ಷಗಳಲ್ಲಿ ಸಿಎಜಿಆರ್‌ರಿಟರ್ನ್ಸ್‌ ಅನ್ನು ‘ಇಎಲ್‌ಎಸ್‌ಎಸ್‌’ ಸರಾಸರಿ ಶೇ 11.25ರಷ್ಟು ನೀಡಿದ್ದರೆ, ಷೇರುಪೇಟೆಯ ‘ಎಸ್‌ಆ್ಯಂಡ್‌ ಪಿ’ ಸೆನ್ಸೆಕ್ಸ್ಶೇ 10.15ರಷ್ಟು ನೀಡಿವೆ.

ಲಾಕ್‌ ಇನ್‌ ಅವಧಿ ಮುಗಿದ ನಂತರ ಇಎಲ್‌ಎಸ್‌ಎಸ್‌ ನಿಧಿಗೆ ಶೇ 10ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ (ಹೆಚ್ಚುವರಿ ಶುಲ್ಕ ಮತ್ತು ಸೆಸ್‌ ಸೇರಿ). ಉಳಿದಂತೆ ಹೂಡಿಕೆದಾರರು ಈಕ್ವಿಟಿ ಷೇರುಗಳು ಮತ್ತು ಷೇರು ಆಧಾರಿತ ನಿಧಿಗಳು ಸೇರಿದಂತೆ ಇತರ ಹೂಡಿಕೆಗಳಿಂದ ಬರುವ ಆದಾಯದಲ್ಲಿ ವರ್ಷಕ್ಕೆ ₹ 1 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

ಈ ಎಲ್ಲ ಸಂಗತಿಗಳಿಂದ ದೀರ್ಘಕಾಲೀನ ಸಂಪತ್ತು ಸೃಷ್ಟಿ, ತೆರಿಗೆ ಉಳಿತಾಯ ಮತ್ತು ಆದಾಯದ ಸಮರ್ಥ ನಿರ್ವಹಣೆಗೆ ಹೂಡಿಕೆದಾರರು ಇಎಲ್‌ಎಸ್‌ಎಸ್‌ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ಮಾರ್ಗವಾಗಿದೆ.

(ಲೇಖಕ: ರಿಲಯನ್ಸ್‌ ನಿಪ್ಪೊನ್‌ ಲೈಫ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ನ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT