ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಲಸದ ಒತ್ತಡ ನಿರ್ವಹಣೆ: ಆಪ್ತ ಸಮಾಲೋಚನೆಗೆ ಐಸಿಎಐ ಸಹಾಯವಾಣಿ

Published : 30 ಸೆಪ್ಟೆಂಬರ್ 2024, 13:35 IST
Last Updated : 30 ಸೆಪ್ಟೆಂಬರ್ 2024, 13:35 IST
ಫಾಲೋ ಮಾಡಿ
Comments

ನವದೆಹಲಿ: ಐಸಿಎಐ ಸದಸ್ಯರಿಗೆ ಆ‍ಪ್ತ ಸಮಾಲೋಚನೆಗಾಗಿ ಸಹಾಯವಾಣಿ ಆರಂಭಿಸಲಾಗಿದೆ ಎಂದು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ಸೋಮವಾರ ತಿಳಿಸಿದೆ.

ಸದಸ್ಯರಿಗಾಗಿ ಸಹವರ್ತಿಗಳ ಜಾಲಗಳನ್ನು ಐಸಿಎಐ ರೂಪಿಸಲಿದೆ. ಈ ಜಾಲದಲ್ಲಿ ಸದಸ್ಯರು ವೃತ್ತಿಗೆ ಸಂಬಂಧಿಸಿದ ತಮ್ಮ ಅನುಭವ ಹಂಚಿಕೊಳ್ಳಬಹುದು, ಸಲಹೆ ಪಡೆಯಬಹುದು ಮತ್ತು ಕೆಲಸದಲ್ಲಿನ ಒತ್ತಡ ನಿರ್ವಹಣೆಗೆ ಸಂಬಂಧಿಸಿದಂತೆ ಪರಸ್ಪರ ನೆರವು ನೀಡಬಹುದು.

ಪುಣೆಯ ಅರ್ನ್ಸ್ಟ್ ಆ್ಯಂಡ್ ಯಂಗ್ (ಇವೈ) ಕಂಪನಿಯಲ್ಲಿ ಲೆಕ್ಕ ಪರಿಶೋಧಕಿಯಾಗಿ ಕೆಲಸ ಮಾಡುತ್ತಿದ್ದ ಅನ್ನಾ ಸೆಬಾಸ್ಟಿಯನ್‌ ಪೆರಾಯಿಲ್‌ (26) ಅವರು ಹೆಚ್ಚಿನ ಕೆಲಸದ ಒತ್ತಡದಿಂದಾಗಿ ಮೃತಪಟ್ಟಿದ್ದಾರೆ ಎಂಬ ಆರೋಪದ ನಂತರ ಈ ಬೆಳವಣಿಗೆ ನಡೆದಿದೆ.

ಐಸಿಎಐನ ರಾಷ್ಟ್ರೀಯ ಸಹಾಯವಾಣಿ 9997599975ಗೆ ಕರೆ ಮಾಡಬಹುದಾಗಿದೆ. ಐಸಿಎಐ, ಆರೋಗ್ಯ ಸಂಸ್ಥೆಗಳ ಸಹಯೋಗದೊಂದಿಗೆ ಒತ್ತಡ ನಿರ್ವಹಣೆ ಕಾರ್ಯಕ್ರಮಗಳನ್ನು ಪರಿಚಯಿಸಲಿದೆ. ಜೊತೆಗೆ, ಉದ್ಯೋಗಿಗಳಿಗೆ ಅನುಕೂಲಕರ ಕೆಲಸದ ವಾತಾವರಣ ರೂಪಿಸಲು ಪ್ರಯತ್ನಿಸಲಿದೆ.

ಐಸಿಎಐ 4 ಲಕ್ಷಕ್ಕೂ ಹೆಚ್ಚು ಸದಸ್ಯರು ಮತ್ತು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT