ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಐಸಿಐ ಬ್ಯಾಂಕ್‌ ಲಾಭ ಶೇ 27ರಷ್ಟು ಏರಿಕೆ

Published 22 ಏಪ್ರಿಲ್ 2023, 16:22 IST
Last Updated 22 ಏಪ್ರಿಲ್ 2023, 16:22 IST
ಅಕ್ಷರ ಗಾತ್ರ

ಮುಂಬೈ: ಐಸಿಐಸಿಐ ಬ್ಯಾಂಕ್‌ನ ನಿವ್ವಳ ಲಾಭವು 2022–23ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 27.64ರಷ್ಟು ಹೆಚ್ಚಾಗಿ ₹9,852 ಕೋಟಿಗೆ ಏರಿಕೆ ಆಗಿದೆ.

ನಿವ್ವಳ ಬಡ್ಡಿ ವರಮಾನ ಶೇ 40ರಷ್ಟು ಏರಿಕೆ ಕಂಡು ₹17,667 ಕೋಟಿಗೆ ಏರಿಕೆ ಆಗಿದೆ. ಇದರಿಂದಾಗಿ ಲಾಭದಲ್ಲಿ ಉತ್ತಮ ಬೆಳವಣಿಗೆ ಕಾಣುವಂತಾಯಿತು ಎಂದು ಬ್ಯಾಂಕ್‌ ಹೇಳಿದೆ.

ಒಟ್ಟು ವರಮಾನ ₹27,412 ಕೋಟಿಯಿಂದ ₹36,108 ಕೋಟಿಗೆ ಏರಿಕೆ ಆಗಿದೆ. ವೆಚ್ಚವು ₹17,119 ಕೋಟಿಯಿಂದ ₹22,282 ಕೋಟಿಎ ಏರಿಕೆ ಆಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಬ್ಯಾಂಕ್‌ನ ಅರ್ಧದಷ್ಟು ಸಾಲವು ರೆಪೊ ದರಕ್ಕೆ ಜೋಡಿಸಲ್ಪಟ್ಟಿವೆ. ಹೀಗಾಗಿ ಆರ್‌ಬಿಐ ರೆಪೊ ದರ ಹೆಚ್ಚಿಸಿದಂತೆಲ್ಲಾ ಸಾಲದ ಬಡ್ಡಿದರವೂ ಬದಲಾಗುತ್ತದೆ. ಇನ್ನೊಂದೆಡೆ ಠೇವಣಿ ದರವು ನಿಧಾನವಾಗಿ ಹೆಚ್ಚಾಗಿದೆ. ಈ ಕಾರಣಗಳಿಂದಾಗಿ ಗಳಿಕೆ ಉತ್ತಮವಾಗಿದೆ ಎಂದು ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಂದೀಪ್‌ ಬಾತ್ರಾ ಹೇಳಿದ್ದಾರೆ.

ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು ಶೇ 3.60 ರಿಂದ ಶೇ 2.81ಕ್ಕೆ ಇಳಿಕೆ ಆಗಿದೆ.ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ₹1,068 ಕೋಟಿಯಿಂದ ₹1,619 ಕೋಟಿಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT