ಸೋಮವಾರ, ಮಾರ್ಚ್ 30, 2020
19 °C

ಬದುಕು ಬದಲಿಸುವ ಐಸಿಐಸಿಐ ಫೌಂಡೇಷನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಾಜ್ಯದ ದೊಡ್ಡಬಳ್ಳಾಪುರ ಬಳಿಯ ಪುಟ್ಟ ಗ್ರಾಮದ ಸೌಲಭ್ಯವಂಚಿತ ಕುಟುಂಬದಲ್ಲಿ  ಜನಿಸಿದ್ದ ಪಾರ್ವತಿ ಎಂ. ಅನಿವಾರ್ಯವಾಗಿ  ಅರ್ಧದಲ್ಲೇ ಶಾಲೆ ಬಿಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾಯಿತು. ಮದುವೆ ಬಳಿಕ ಪಾರ್ವತಿ ಹಾಗೂ ಅವರ ಪತಿ ಕಡಿಮೆ ವೇತನದ ಉದ್ಯೋಗವನ್ನೇ ನೆಚ್ಚಿಕೊಂಡು ತಮ್ಮ ಕುಟುಂಬ ನಿರ್ವಹಿಸುತ್ತಿದ್ದರು.

‘ಐಸಿಐಸಿಐ ಅಕಾಡೆಮಿ ಫಾರ್ ಸ್ಕಿಲ್ಸ್ ಆಯೋಜಿಸಿದ್ದ ಉಚಿತ ‘ಕಚೇರಿ ಆಡಳಿತ’ (Office Administration) ಕೋರ್ಸ್‌, ಪಾರ್ವತಿಯ ಬದುಕಿನಲ್ಲಿ ಹೊಸ ಆಶಾಕಿರಣವಾಗಿ ಮೂಡಿಬಂದಿತು. ಈ ಕೋರ್ಸ್ ಅವರ ಜೀವನದಲ್ಲಿ ಮೊದಲ ಬಾರಿಗೆ ಆತ್ಮವಿಶ್ವಾಸ ಗಳಿಸಲು ಪ್ರೇರಣೆಯಾಯಿತು. ಕೋರ್ಸ್‌ಗೆ ಹೆಸರು ನೋಂದಣಿ ಮಾಡಿಕೊಂಡಿದ್ದ ಪಾರ್ವತಿ ಅವರ ಜೀವನವನ್ನೇ ಈ ತರಬೇತಿ ಬದಲಿಸಿತು.

‘ನಾನು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದು ಕಲಿತೆ. ವೃತ್ತಿಪರ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿತುಕೊಂಡೆ. ಜತೆಗೆ ತಂತ್ರಜ್ಞಾನದ ಬಳಕೆ ಮತ್ತು ಕೆಲಸದ ಸ್ಥಳದಲ್ಲಿ ಕಂಪ್ಯೂಟರ್ ಬಳಕೆಯ ಕೌಶಲ ಅರಿತೆ. ಈ ಕೋರ್ಸ್ ನನ್ನ ಜೀವನದಲ್ಲಿ ಮೊದಲ ಬಾರಿಗೆ ಆತ್ಮವಿಶ್ವಾಸ ಗಳಿಸಲು ಪ್ರೇರಣೆ ಆಯಿತು’ ಎಂದು ಪಾರ್ವತಿ ಅವರು ಆತ್ಮವಿಶ್ವಾಸದಿಂದ ಹೇಳುತ್ತಾರೆ.

ಈ ತರಬೇತಿ ಶಿಬಿರ ಪೂರ್ಣಗೊಳಿಸಿದ ಪಾರ್ವತಿಗೆ, ಪ್ರಮುಖ ಚಿಲ್ಲರೆ ಮಳಿಗೆಯಲ್ಲಿ ಉತ್ತಮ ಮಾಸಿಕ ವೇತನದ ಗ್ರಾಹಕ ಸೇವಾ ವಿಭಾಗದಲ್ಲಿ ಹುದ್ದೆ ಸಿಕ್ಕಿತು. ಈಗ ಅವರು ಆ ಮಳಿಗೆಯ ಪ್ರಮುಖ ಸಾಧಕಿಯಾಗಿದ್ದಾರೆ.

ಅವರ ತಿಂಗಳ ವೇತನ ಹೆಚ್ಚಾಗಿದೆ. ಪ್ರತಿ ವಾರ ಒಂದೂವರೆ ದಿನಗಳ ರಜೆಗೆ ಅವರು ಅರ್ಹತೆ ಪಡೆದಿದ್ದಾರೆ. ಇದರಿಂದಾಗಿ ಮಕ್ಕಳ ಜತೆ ಅಮೂಲ್ಯ ಸಮಯವನ್ನು ಕಳೆಯಲು ಅವರಿಗೆ ಸಾಧ್ಯವಾಗುತ್ತಿದೆ. ಕೆಲ ಸಮಯದ ನಂತರ ಅವರು ಬ್ಯಾಂಕ್ ಸಾಲ ಪಡೆದು ಕಾರು ಖರೀದಿಸಿದರು. ಇದನ್ನು ಅವರ ಪತಿ ಬಾಡಿಗೆಗೆ ಓಡಿಸುತ್ತಿದ್ದಾರೆ. ಇದರಿಂದ ಅವರ ಕುಟುಂಬದ ಆದಾಯ ಮತ್ತಷ್ಟು ಹೆಚ್ಚಿದೆ.

ಇದು ಪಾರ್ವತಿ ಅವರೊಬ್ಬರ ಯಶೋಗಾಥೆಯಲ್ಲ. ಐಸಿಐಸಿಐ ಫೌಂಡೇಷನ್ ಫಾರ್ ಇನ್‍ಕ್ಲೂಸಿವ್ ಗ್ರೋಥ್, 2008 ರಲ್ಲಿ ಆರಂಭವಾದಾಗಿನಿಂದಲೂ ಹಲವರ ಬದುಕು ಬದಲಾಯಿಸುತ್ತಿದೆ. ಐಸಿಐಸಿಐ ಸಮೂಹದ ಪರಂಪರೆ ಎನಿಸಿದ ಎಲ್ಲರನ್ನೂ ಒಳಗೊಂಡ ಪ್ರಗತಿಯನ್ನು ರಾಷ್ಟ್ರವ್ಯಾಪಿ ಕೌಶಲ ಅಭಿವೃದ್ಧಿ ಮತ್ತು ಸುಸ್ಥಿರ
ಜೀವನಾಧಾರ ಸಾಧಿಸುವ ಧ್ಯೇಯಕ್ಕೆ ಅನುಗುಣವಾಗಿ ಈ ಫೌಂಡೇಷನ್ ರಚಿಸಲಾಗಿದೆ.

ಐಸಿಐಸಿಐ ಅಕಾಡೆಮಿ ಫಾರ್ ಸ್ಕಿಲ್ಸ್ (ಐಎಎಸ್) ಮೂಲಕ ನಗರ ಮಟ್ಟದಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಮಟ್ಟದಲ್ಲಿ ಗ್ರಾಮೀಣ ಉಪಕ್ರಮಗಳು (ಆರ್‌ಐ) ಮತ್ತು ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳ (ಆರ್‌ಎಸ್‌ಇಟಿಐ) ಮೂಲಕವೂ ಕಾರ್ಯನಿರ್ವಹಿಸುತ್ತಿದೆ.

ಇದುವರೆಗೆ ಈ ಫೌಂಡೇಷನ್ 3.5 ಲಕ್ಷಕ್ಕೂ ಹೆಚ್ಚು ಸೌಲಭ್ಯವಂಚಿತ ಜನರಿಗೆ ದೇಶದಾದ್ಯಂತ ಉಚಿತ ಕೌಶಲ ಅಭಿವೃದ್ಧಿ ತರಬೇತಿ ನೀಡಿದೆ. ಅವರಿಗೆ ಸುಸ್ಥಿರ ಜೀವನಾಧಾರ ಕಲ್ಪಿಸಿಕೊಟ್ಟಿದೆ. ಕರ್ನಾಟಕ ರಾಜ್ಯದಲ್ಲೇ ಪ್ರತಿಷ್ಠಾನವು 19 ಸಾವಿರ ಮಂದಿಗೆ ತರಬೇತಿ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು