ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹2 ಲಕ್ಷ ನಗದು ವಹಿವಾಟು ಮೇಲೆ ನಿಗಾ

Published 17 ಆಗಸ್ಟ್ 2024, 15:24 IST
Last Updated 17 ಆಗಸ್ಟ್ 2024, 15:24 IST
ಅಕ್ಷರ ಗಾತ್ರ

ನವದೆಹಲಿ: ಹೋಟೆಲ್‌, ಲಕ್ಸುರಿ ಬ್ರ್ಯಾಂಡ್‌ ಮಾರಾಟ, ಆಸ್ಪತ್ರೆ ಮತ್ತು ಐವಿಎಫ್‌ ಕ್ಲಿನಿಕ್‌ಗಳಲ್ಲಿ ಅವ್ಯಾಹತವಾಗಿ ನಗದು ವಹಿವಾಟು ನಡೆಯುತ್ತದೆ. ಸಂಬಂಧಪಟ್ಟ ಸಂಸ್ಥೆಗಳು ಈ ಬಗ್ಗೆ ಬಹಿರಂಗಪಡಿಸುವುದಿಲ್ಲ. ಹಾಗಾಗಿ, ಇಂತಹ ವ್ಯವಹಾರದ ಬಗ್ಗೆ ತಪಾಸಣೆ ನಡೆಸಬೇಕಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ), ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.

ಕಳೆದ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ ಈ ಸಂಸ್ಥೆಗಳಲ್ಲಿ ನಡೆದಿರುವ ನಗದು ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸಬೇಕು. ಬಾಕಿ ತೆರಿಗೆ ಮೊತ್ತವನ್ನು ವಸೂಲಿ ಮಾಡಬೇಕು ಎಂದು ತಿಳಿಸಿದೆ.

‘ಗ್ರಾಹಕರು ₹2 ಲಕ್ಷಕ್ಕೂ ಹೆಚ್ಚು ನಗದು ವಹಿವಾಟು ನಡೆಸಿದರೆ ಆ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳು ಆದಾಯ ತೆರಿಗೆ ಇಲಾಖೆಗೆ ಹಣಕಾಸು ವ್ಯವಹಾರಗಳ ಹೇಳಿಕೆ (ಎಸ್‌ಎಫ್‌ಟಿ) ಸಲ್ಲಿಸಬೇಕಿದೆ. ಆದರೆ, ಈ ನಿಯಮಾವಳಿ ಉಲ್ಲಂಘಿಸಲಾಗುತ್ತಿದೆ’ ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಷ್ಟು ಮೊತ್ತದ ವಹಿವಾಟು ನಡೆಸುವ ವೇಳೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್‌ 139(ಎ) ಅನ್ವಯ ಪ್ಯಾನ್ ಕಾರ್ಡ್‌ ಒದಗಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

ತೆರಿಗೆ ವಂಚನೆಗೆ ಸಂಬಂಧಿಸಿದಂತೆ 2023–24ರಲ್ಲಿ ಇಲಾಖೆಯಿಂದ  ದೇಶದಾದ್ಯಂತ 1,100ಕ್ಕೂ ಹೆಚ್ಚು ದಾಳಿ ನಡೆಸಲಾಗಿದೆ. ಒಟ್ಟು ₹2,500 ಕೋಟಿ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದ್ದು, ಈ ಪೈಕಿ ₹1,700 ನಗದು ಇದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT