ಮುಂಬೈ/ನವದೆಹಲಿ: ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿನ ಹರಿಯಾಣ ಸರ್ಕಾರಕ್ಕೆ ಸೇರಿದ ಖಾತೆಗಳಲ್ಲಿ ಒಟ್ಟು ₹590 ಕೋಟಿ ಮೊತ್ತದ ವಂಚನೆ ನಡೆದಿರುವುದರಲ್ಲಿ ಬ್ಯಾಂಕ್ನ ನೌಕರರು ಮತ್ತು ಹೊರಗಿನವರ ಪಾತ್ರ ಇದೆ ಎಂದು ಬ್ಯಾಂಕ್ನ ಸಿಇಒ ವಿ. ವೈದ್ಯನಾಥನ್ ಹೇಳಿದ್ದಾರೆ.

ವಂಚನೆಯ ಮೊತ್ತವನ್ನು ಭರಿಸುವುದಕ್ಕಾಗಿ ಬ್ಯಾಂಕ್ ಒಂದಿಷ್ಟು ಮೊತ್ತವನ್ನು ತೆಗೆದಿರಿಸಬೇಕಾಗುತ್ತದೆ. ಆದರೆ, ಇದರಿಂದಾಗಿ ಬ್ಯಾಂಕ್ನ ಲಾಭದ ಮೇಲೆ ದೊಡ್ಡ ಪರಿಣಾಮ ಆಗುವ ಸಾಧ್ಯತೆ ಇಲ್ಲ ಎಂದು ಅವರು ಬ್ಯಾಂಕ್ನ ಹೂಡಿಕೆದಾರರು ಹಾಗೂ ಮಾರುಕಟ್ಟೆ ತಜ್ಞರನ್ನು ಉದ್ದೇಶಿಸಿ ಹೇಳಿದ್ದಾರೆ.

ವಂಚನೆಗೆ ಸಂಬಂಧಿಸಿದಂತೆ ವಿಧಿವಿಜ್ಞಾನ ಲೆಕ್ಕಪರಿಶೋಧನೆ ನಡೆಸುವಂತೆ ಕೆಪಿಎಂಜಿ ಸಂಸ್ಥೆಯನ್ನು ಕೋರಲಾಗಿದೆ, ಲೆಕ್ಕಪರಿಶೋಧನೆಯು ನಾಲ್ಕರಿಂದ ಐದು ವಾರಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ವಿವರಿಸಿದ್ದಾರೆ.

ನಕಲಿ ಚೆಕ್ಗಳನ್ನು ಬಳಸಿ ನಡೆಸಿದ ವಹಿವಾಟಿನ ಮೂಲಕ ವಂಚನೆ ಎಸಗಲಾಗಿದೆ, ವಂಚನೆಯು ಒಂದು ಶಾಖೆಗೆ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆರ್ಬಿಐ ನಿಗಾ: ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿನ ಬೆಳವಣಿಗೆಗಳನ್ನು ಆರ್ಬಿಐ ಗಮನಿಸುತ್ತಿದೆ ಎಂದು ಗವರ್ನರ್ ಸಂಜಯ್ ಮಲ್ಹೋತ್ರಾ ಸುದ್ದಿಗಾರರ ಬಳಿ ಹೇಳಿದ್ದಾರೆ.

ಕುಸಿದ ಷೇರು: ವಂಚನೆ ಪ್ರಕರಣ ಬಯಲಾದ ನಂತರದಲ್ಲಿ ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಷೇರು ಮೌಲ್ಯವು ಶೇ 19.99ರವರೆಗೆ ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.