ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಲಕ್ಷ ಷೇರು ಉಡುಗೊರೆ ನೀಡಿದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಸಿಇಒ ವೈದ್ಯನಾಥನ್

Last Updated 22 ಫೆಬ್ರುವರಿ 2022, 16:01 IST
ಅಕ್ಷರ ಗಾತ್ರ

ನವದೆಹಲಿ: ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿ. ವೈದ್ಯನಾಥನ್ ಅವರು ತಮ್ಮ ಬಳಿ ಇದ್ದ, ಬ್ಯಾಂಕ್‌ನ 9 ಲಕ್ಷ ಷೇರುಗಳನ್ನು ತಮ್ಮ ತರಬೇತುದಾರ, ಮನೆಯ ಸಹಾಯಕ, ಚಾಲಕ ಸೇರಿದಂತೆ ಒಟ್ಟು ಐವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇಷ್ಟು ಷೇರುಗಳ ಮೌಲ್ಯವು ₹ 3.95 ಕೋಟಿಗಿಂತ ಹೆಚ್ಚು.

ಐದೂ ಜನ ವೈದ್ಯನಾಥನ್ ಅವರ ಸಂಬಂಧಿಗಳಲ್ಲ. ಅವರಿಗೆ ಮನೆ ಖರೀದಿಗೆ ನೆರವಾಗಲಿ ಎಂಬ ಉದ್ದೇಶದಿಂದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ವೈದ್ಯನಾಥನ್ ಅವರು ಈ ಹಿಂದೆಯೂ ಇದೇ ರೀತಿ ಷೇರು ಉಡುಗೊರೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT