ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ಬಿಕ್ಕಟ್ಟು: ಜಿಡಿಪಿ ತಗ್ಗಿಸಿದ ಐಎಂಎಫ್‌

ಹೆಚ್ಚಾಗದ ಗ್ರಾಮೀಣ ಜನರ ಆದಾಯ
Last Updated 20 ಜನವರಿ 2020, 20:00 IST
ಅಕ್ಷರ ಗಾತ್ರ
ADVERTISEMENT
""

ದಾವೋಸ್‌: ಭಾರತದ ಆರ್ಥಿಕ ವೃದ್ಧಿ ದರವನ್ನು (ಜಿಡಿಪಿ) ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್‌) ಪ್ರಸಕ್ತ ಹಣಕಾಸು ವರ್ಷಕ್ಕೆ (2019–20) ಶೇ 4.8ರಷ್ಟಕ್ಕೆ ತಗ್ಗಿಸಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಎದುರಿಸುತ್ತಿರುವ ನಗದು ಬಿಕ್ಕಟ್ಟು ಮತ್ತು ಗ್ರಾಮೀಣ ಪ್ರದೇಶದ ಜನರ ಆದಾಯವು ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಾಗದಿರುವುದರಿಂದ ವೃದ್ಧಿ ದರವನ್ನು ಕೆಳಮುಖವಾಗಿ ಪರಿಷ್ಕರಿಸಲಾಗಿದೆ ಎಂದು ಸೋಮವಾರ ಇಲ್ಲಿ ಪ್ರಕಟಿಸಲಾಗಿದೆ.

ಭಾರತದ ಜಿಡಿಪಿ ದರ ಶೇ 6.1ರಷ್ಟು ಬೆಳವಣಿಗೆ ಕಾಣಲಿದೆ ಎಂದು 2019ರ ಅಕ್ಟೋಬರ್‌ನಲ್ಲಿ ಅಂದಾಜು ಮಾಡಿತ್ತು.

ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಗೆ ಮುನ್ನ ಜಾಗತಿಕ ಆರ್ಥಿಕತೆಗೆ ಸಂಬಂಧಿಸಿದ ಮುನ್ನೋಟದಲ್ಲಿ ಐಎಂಎಫ್‌ ಈ ಮಾಹಿತಿ ನೀಡಿದೆ.

2020–21ನೇ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರವು ಶೇ 5.8ರಷ್ಟು ಮತ್ತು 2021–22ನೇ ವರ್ಷದಲ್ಲಿ ಶೇ 6.5ಕ್ಕೆ ಏರುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

‘ಎನ್‌ಬಿಎಫ್‌ಸಿಗಳು ಎದುರಿಸುತ್ತಿರುವ ನಗದು ಬಿಕ್ಕಟ್ಟು ಮತ್ತು ಸಾಲ ನೀಡಿಕೆಯಲ್ಲಿ ಹೆಚ್ಚಳ ಕಂಡುಬರದ ಕಾರಣಕ್ಕೆ ಭಾರತದಲ್ಲಿ ಸರಕು ಮತ್ತು ಸೇವೆಗಳ ಬೇಡಿಕೆಯು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ನಿಧಾನಗೊಂಡಿದೆ’ ಎಂದು ಐಎಂಎಫ್‌ನ ಮುಖ್ಯ ಆರ್ಥಿಕತಜ್ಞೆಯಾಗಿರುವ ಭಾರತದ ಸಂಜಾತೆ ಗೀತಾ ಗೋಪಿನಾಥ ಹೇಳಿದ್ದಾರೆ.

ಜಾಗತಿಕ ಆರ್ಥಿಕತೆಗೂ ಮಂದಗತಿ
ಜಾಗತಿಕ ಆರ್ಥಿಕತೆಯ ಮುನ್ನೋಟವನ್ನೂ ‘ಐಎಂಎಫ್‌’ ಅಲ್ಪಮಟ್ಟಿಗೆ (ಶೇ 0.1) ಕೆಳಮುಖವಾಗಿ ಪರಿಷ್ಕರಿಸಿದೆ. ಪರಿಷ್ಕೃತ ಅಂದಾಜಿನ ಪ್ರಕಾರ 2019ರಲ್ಲಿ ಶೇ 2.9, 2020ರಲ್ಲಿ ಶೇ 3.3 ಮತ್ತು 2021ರಲ್ಲಿ ಶೇ 3.4ರಷ್ಟು ಇರಲಿದೆ.

‘ಜಾಗತಿಕ ಆರ್ಥಿಕ ಪ್ರಗತಿಯು ಮತ್ತೆ ನಿಧಾನಗೊಳ್ಳಲು ಆರಂಭಿಸಿದರೆ ಪ್ರತಿಯೊಬ್ಬರೂ ಪರಸ್ಪರ ಸಮನ್ವಯತೆಯಿಂದ ಕಾರ್ಯೋನ್ಮುಖವಾಗಲು ಸಿದ್ಧರಾಗಿರಬೇಕು’ ಎಂದು ‘ಎಂಎಂಎಫ್‌’ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಿಯೊರ್ಗಿವಾ ಅವರು ವಿಶ್ವ ಸಮುದಾಯಕ್ಕೆ ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT