ಮುಂಬೈ/ನವದೆಹಲಿ: ಭಾರತವು 4.69 ಲಕ್ಷ ಟನ್‌ಗಳಷ್ಟು ಗೋಧಿ ರಫ್ತು ಮಾಡಲು ಅವಕಾಶ ನೀಡಿದೆ. ಮುಖ್ಯವಾಗಿ ಬಾಂಗ್ಲಾದೇಶ, ಫಿಲಿಪ್ಪೀನ್ಸ್, ತಾಂಜೇನಿಯಾ ಮತ್ತು ಮಲೇಷ್ಯಾ ದೇಶಗಳಿಗೆ ರಫ್ತು ಆಗಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಕಳೆದ ತಿಂಗಳಷ್ಟೇ ಗೋಧಿ ರಫ್ತು ನಿಷೇಧ ಮಾಡಿದೆ. ಇದರಿಂದಾಗಿ 17 ಲಕ್ಷ ಟನ್‌ಗಳಷ್ಟು ಗೋಧಿ ಬಂದರುಗಳಲ್ಲಿಯೇ ಉಳಿದಿದ್ದು, ಮುಂಗಾರು ಮಳೆಯಿಂದಾಗಿ ನಷ್ಟವಾಗುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.
ಬಿಸಿಗಾಳಿಯಿಂದಾಗಿ ಉತ್ಪಾದನೆ ಪ್ರಮಾಣ ಕಡಿಮೆ ಆಗಿರುವುದು ಹಾಗೂ ಬೆಲೆಯು ದಾಖಲೆ ಮಟ್ಟಕ್ಕೆ ಏರಿಕೆ ಕಂಡಿರುವುದರಿಂದ ಕೇಂದ್ರ ಸರ್ಕಾರವು ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದೆ. ಮೇ 13 ಅಥವಾ ಅದಕ್ಕೂ ಮೊದಲು ಗೋಧಿ ಖರೀದಿಗೆ, ‘ಬದಲಾಯಿಸಲು ಸಾಧ್ಯವಿಲ್ಲದ ಎಲ್‌ಒಸಿ’ (ಲೆಟರ್ ಆಫ್ ಕ್ರೆಡಿಟ್) ನೀಡಿದ್ದಲ್ಲಿ ರಫ್ತಿಗೆ ಅವಕಾಶ ಕಲ್ಪಿಸಲಾಗಿದೆ.
ಏಪ್ರಿಲ್‌ನಲ್ಲಿ 14.6 ಲಕ್ಷ ಟನ್ ಪ್ರಮಾಣದ ಗೋಧಿ ರಫ್ತು ಮಾಡಲಾಗಿತ್ತು. ಮೇನಲ್ಲಿ ರಫ್ತು ಪ್ರಮಾಣವು 11.3 ಲಕ್ಷ ಟನ್‌ಗಳಿಗೆ ಇಳಿಕೆ ಆಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.