ನವದೆಹಲಿ: ದೇಶದ ಅರ್ಥ ವ್ಯವಸ್ಥೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ (2025–26) ಶೇಕಡ 7.4ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ. ಹಿಂದಿನ ಹಣಕಾಸು ವರ್ಷದಲ್ಲಿ ಬೆಳವಣಿಗೆ ಪ್ರಮಾಣವು ಶೇ 6.5ರಷ್ಟು ಇತ್ತು.

ಸೇವಾ ವಲಯ ಹಾಗೂ ತಯಾರಿಕಾ ವಲಯಗಳಲ್ಲಿ ಚಟುವಟಿಕೆ ಚೆನ್ನಾಗಿ ಇರುವುದು ಈ ಬಾರಿ ಬೆಳವಣಿಗೆಯು ಕಳೆದ ವರ್ಷಕ್ಕಿಂತ ಹೆಚ್ಚಿರುವಂತೆ ಮಾಡಲಿದೆ. ಈ ಮೂಲಕ ಭಾರತವು ಪ್ರಮುಖ ಅರ್ಥವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆ ಕಾಣುವ ದೇಶವಾಗಿ ಮುಂದುವರಿಯಲಿದೆ.

2023–24ರಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಪ್ರಮಾಣವು ಶೇ 9.2ರಷ್ಟು ಇತ್ತು. ದೇಶದ ಜಿಡಿಪಿ ಬೆಳವಣಿಗೆಗೆ ಸಂಬಂಧಿಸಿದ ಮೊದಲ ಅಂದಾಜನ್ನು ಕೇಂದ್ರ ಸರ್ಕಾರವು ಬುಧವಾರ ಬಿಡುಗಡೆ ಮಾಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ತಯಾರಿಕಾ ವಲಯದಲ್ಲಿನ ಒಟ್ಟು ಮೌಲ್ಯ ಸೇರ್ಪಡೆಯು (ಜಿವಿಎ) ಶೇ 7ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಇದು ಹಿಂದಿನ ವರ್ಷದ ಶೇ 4.5ರಷ್ಟು ಜಿವಿಎಗಿಂತ ಹೆಚ್ಚಿನದ್ದಾಗಲಿದೆ.

ಸೇವಾ ವಲಯದಲ್ಲಿನ ಬೆಳವಣಿಗೆಯು ಶೇ 9.1ರಷ್ಟು ಇರಲಿದೆ (ಹಿಂದಿನ ವರ್ಷದಲ್ಲಿ ಇದು ಶೇ 7.2ರಷ್ಟು ಇತ್ತು) ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಬಿಡುಗಡೆ ಮಾಡಿರುವ ಅಂದಾಜಿನಲ್ಲಿ ಹೇಳಲಾಗಿದೆ.

ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿನ ಬೆಳವಣಿಗೆಯು ಈ ವರ್ಷದಲ್ಲಿ ಶೇ 3.1ಕ್ಕೆ ಇಳಿಕೆ ಆಗುವ ಸಾಧ್ಯತೆ ಇದೆ. ಹಿಂದಿನ ವರ್ಷದಲ್ಲಿ ಇದು ಶೇ 4.6ರ ಮಟ್ಟದಲ್ಲಿತ್ತು. ಈ ವರ್ಷದಲ್ಲಿ ನೈಜ ಜಿಡಿಪಿ ಗಾತ್ರವು ₹201.90 ಲಕ್ಷ ಕೋಟಿಯಷ್ಟಾಗುವ ಅಂದಾಜು ಮಾಡಲಾಗಿದೆ. ಅಮೆರಿಕದ ಡಾಲರ್ ಲೆಕ್ಕದಲ್ಲಿ ಜಿಡಿಪಿ ಗಾತ್ರವು 3.97 ಶತಕೋಟಿ ಆಗಲಿದೆ (1 ಡಾಲರ್ 90 ರೂಪಾಯಿಗೆ ಸಮ ಎಂಬ ಅಂದಾಜಿನೊಂದಿಗೆ).

ಕೇಂದ್ರ ಸರ್ಕಾರವು ಮುಂದಿನ ಹಣಕಾಸು ವರ್ಷದ ಬಜೆಟ್ಅನ್ನು ಫೆಬ್ರುವರಿ 1ರಂದು ಮಂಡಿಸುವ ನಿರೀಕ್ಷೆ ಇದ್ದು, ಬಜೆಟ್ ಸಿದ್ಧಪಡಿಸುವ ಸಂದರ್ಭದಲ್ಲಿ ಮುಂಗಡ ಅಂದಾಜನ್ನು ಆಶ್ರಯಿಸುತ್ತದೆ.

‘ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆಗಳು ಹೆಚ್ಚಿದ್ದರೂ, ದೇಶದ ಬೆಳವಣಿಗೆ ದರವು ಕಡಿಮೆ ಆಗಿಲ್ಲ. ಹಣಕಾಸು ಮತ್ತು ವಿತ್ತೀಯ ನೀತಿಗಳು ಹೊಂದಾಣಿಕೆಯ ಗುಣ ಹೊಂದಿದ್ದುದು, ಕಾರ್ಪೊರೇಟ್ ಕಂಪನಿಗಳ ಹಣಕಾಸಿನ ಸ್ಥಿತಿ ಚೆನ್ನಾಗಿರುವುದು, ಮುಂಗಾರು ಮಳೆ ಚೆನ್ನಾಗಿ ಆಗಿರುವುದು ಹಾಗೂ ಕಚ್ಚಾ ತೈಲದ ಬೆಲೆಯು ಕಡಿಮೆ ಇರುವುದು ಇದಕ್ಕೆ ಕಾರಣ’ ಎಂದು ಕ್ರಿಸಿಲ್ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ಧರ್ಮಕೀರ್ತಿ ಜೋಷಿ ಹೇಳಿದ್ದಾರೆ.

ಹಬ್ಬಗಳ ಹೊತ್ತಿನಲ್ಲಿ ನಡೆಯುವ ಉತ್ತಮ ಮಾರಾಟ, ಜಿಎಸ್ಟಿ ದರ ಪರಿಷ್ಕರಣೆ ಹಾಗೂ ಆದಾಯ ತೆರಿಗೆ ಮಿತಿಯಲ್ಲಿನ ವಿನಾಯಿತಿಗಳು ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಹಬ್ಬಗಳ ನಂತರದಲ್ಲಿಯೂ ಬೇಡಿಕೆ ಉತ್ತಮ ಮಟ್ಟದಲ್ಲಿ ಮುಂದುವರಿದಿದೆ ಎಂದು ಬ್ಯಾಂಕ್ ಆಫ್ ಬರೋಡದ ಮುಖ್ಯ ಅರ್ಥಶಾಸ್ತ್ರಜ್ಞೆ ಜಾನ್ಹವಿ ಪ್ರಭಾಕರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.