ನವದೆಹಲಿ: ಸರಕು ಮತ್ತು ಹೂಡಿಕೆಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಸಂಬಂಧ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮಾತುಕತೆ ಸೋಮವಾರ ಮುಕ್ತಾಯಗೊಂಡಿದೆ.

ಈ ವರ್ಷದ ಮೇ ತಿಂಗಳಲ್ಲಿ ಮಾತುಕತೆ ಪ್ರಾರಂಭವಾಗಿತ್ತು.

ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ಮುಕ್ತಾಯಗೊಂಡಿದೆ ಎಂದು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಸೋಮವಾರ ಹೇಳಿದ್ದಾರೆ.

ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತಕ್ಕೆ ರಫ್ತಾಗುವ ಶೇ 95ರಷ್ಟು ಉತ್ಪನ್ನಗಳ ಮೇಲಿನ ಸುಂಕ ಕಡಿಮೆಯಾಗುತ್ತದೆ. ಮುಂದಿನ ಎರಡು ದಶಕಗಳಲ್ಲಿ ಭಾರತಕ್ಕೆ ನ್ಯೂಜಿಲೆಂಡ್ನಿಂದ ರಫ್ತು ಪ್ರಮಾಣ ವರ್ಷಕ್ಕೆ 1.1ಶತಕೋಟಿ ಡಾಲರ್ನಿಂದ 1.3 ಶತಕೋಟಿ ಡಾಲರ್ಗೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಲಕ್ಸನ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ನ್ಯೂಜಿಲೆಂಡ್- ಭಾರತ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಾತುಕತೆ ಮುಕ್ತಾಯದ ನಂತರ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ. ಈ ಒಪ್ಪಂದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಗಾಢವಾದ ಸ್ನೇಹದ ಮೇಲೆ ರೂಪುಗೊಂಡಿದೆ ಎಂದೂ ಅವರು ಹೇಳಿದ್ದಾರೆ.

ಭಾರತದಿಂದ ರಫ್ತಾಗುವ ಸರಕುಗಳು

ಇಂಧನ, ಜವಳಿ ಮತ್ತು ಔಷಧಗಳು ಮುಂಚೂಣಿಯಲ್ಲಿವೆ.

ವಾಯುಯಾನ ಟರ್ಬೈನ್ ಇಂಧನ

ಬಟ್ಟೆ ಮತ್ತು ಜವಳಿ

ಪೆಟ್ರೋಲಿಯಂ ಉತ್ಪನ್ನಗಳು

ಆಟೋಮೊಬೈಲ್ಗಳು ಮತ್ತು ಬಿಡಿಭಾಗಗಳು

ಕಾಗದ

ಎಲೆಕ್ಟ್ರಾನಿಕ್ಸ್, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು

ಸಿಗಡಿ, ಬಾಸ್ಮತಿ ಅಕ್ಕಿ ಮತ್ತು ಚಿನ್ನದ ಆಭರಣಗಳು ಸೇರಿವೆ.

ನ್ಯೂಜಿಲೆಂಡ್ನಿಂದ ಭಾರತಕ್ಕೆ ಆಮದಾಗುವ ಸರಕುಗಳು

ಕಚ್ಚಾ ವಸ್ತುಗಳು, ಮರದ ವಸ್ತುಗಳು, ಕಲ್ಲಿದ್ದಲು, ಅಲ್ಯೂಮಿನಿಯಂ ಮತ್ತು ಉಕ್ಕಿನ ಉತ್ಪನ್ನಗಳು, ಕೃಷಿ ಮತ್ತು ಪ್ರಾಣಿಜನ್ಯ ಉತ್ಪನ್ನಗಳು ಮುಖ್ಯವಾಗಿ ಉಣ್ಣೆ, ಹಾಲಿನ ಪೌಡರ್, ಸೇಬು ಮತ್ತು ಕಿವಿ ಹಣ್ಣು ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.