ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳೆ ಎಣ್ಣೆ ಆಮದು: 11 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಸಂಭವ

Last Updated 25 ಮೇ 2022, 10:45 IST
ಅಕ್ಷರ ಗಾತ್ರ

ಮುಂಬೈ: ಅಕ್ಟೋಬರ್‌ 31ಕ್ಕೆ ಕೊನೆಗೊಳ್ಳಲಿರುವ 2021–22ನೇ ಮಾರುಕಟ್ಟೆ ವರ್ಷದಲ್ಲಿಭಾರತವು ಆಮದು ಮಾಡಿಕೊಳ್ಳಲಿರುವ ತಾಳೆ ಎಣ್ಣೆ ಪ್ರಮಾಣವು ಶೇಕಡ 19ರಷ್ಟು ಇಳಿಕೆ ಆಗಲಿದ್ದು, 11 ವರ್ಷಗಳ ಕನಿಷ್ಠ ಮಟ್ಟ ತಲುಪಲಿದೆ ಎಂದು ವಿತರಕರು ಹೇಳಿದ್ದಾರೆ.

ಇಂಡೊನೇಷ್ಯಾವು ತಾಳೆ ಎಣ್ಣೆ ರಫ್ತು ಮೇಲೆ ಹೇರಿದ್ದ ನಿರ್ಬಂಧ ಹಾಗೂ ಭಾರತವು ಸುಂಕ ರಹಿತವಾಗಿ ಕಚ್ಚಾ ಸೋಯಾ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿರುವುದರಿಂದ ತಾಳೆ ಎಣ್ಣೆ ಆಮದು ಕಡಿಮೆ ಆಗಲಿದೆ ಎಂದು ತಿಳಿಸಿದ್ದಾರೆ.

ಭಾರತದ ಆಮದು ವಹಿವಾಟುದಾರರು ಕಡಿಮೆ ಪ್ರಮಾಣದಲ್ಲಿ ತಾಳೆ ಎಣ್ಣೆ ಖರೀದಿಸುವುದರಿಂದ ಮಲೇಷ್ಯಾದ ತಾಳೆ ಎಣ್ಣೆ ಬೆಲೆ ತಗ್ಗಲಿದೆ. ಅಲ್ಲದೆ, ಸೋಯಾ ಎಣ್ಣೆ ಆಮದು ದಾಖಲೆ ಮಟ್ಟಕ್ಕೆ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಅಕ್ಟೋಬರ್‌ 31ಕ್ಕೆ ಕೊನೆಗೊಳ್ಳಲಿರುವ 2021–22ನೇ ಮಾರುಕಟ್ಟೆ ವರ್ಷದಲ್ಲಿ ಭಾರತದ ತಾಳೆ ಎಣ್ಣೆ ಆಮದು ಪ್ರಮಾಣವು 67 ಲಕ್ಷ ಟನ್‌ಗಳಿಗೆ ಇಳಿಕೆ ಆಗಲಿದ್ದು, ಇದು 2010–11ನೇ ಮಾರುಕಟ್ಟೆ ವರ್ಷದ ನಂತರದ ಅತ್ಯಂತ ಕನಿಷ್ಠ ಮಟ್ಟವಾಗಿರಲಿದೆ.

ಸೋಯಾ ಎಣ್ಣೆ ಆಮದು ಶೇ 57ರಷ್ಟು ಹೆಚ್ಚಾಗಲಿದ್ದು, ದಾಖಲೆಯ ಮಟ್ಟವಾದ 45 ಲಕ್ಷ ಟನ್‌ಗೆ ತಲುಪಲಿದೆ ಎಂದು ವಿತರಕರು ತಿಳಿಸಿದ್ದಾರೆ.

ಭಾರತದಲ್ಲಿ ಕಚ್ಚಾ ತಾಳೆ ಎಣ್ಣೆಗೆ ಪ್ರತಿ ಟನ್‌ಗೆ 1,775 ಡಾಲರ್‌ಗೆ ನೀಡಲಾಗುತ್ತಿದೆ. ಕಚ್ಚಾ ಸೋಯಾ ಎಣ್ಣೆ ದರ ಪ್ರತಿ ಟನ್‌ಗೆ 1,845 ಡಾಲರ್‌ ಇದೆ. ಆದರೆ, ಕಚ್ಚಾ ತಾಳೆ ಎಣ್ಣೆಗೆ ಶೇ 5.5ರಷ್ಟು ಆಮದು ಸುಂಕ ಸೇರುವುದರಿಂದ ಪ್ರತಿ ಟನ್‌ ಬೆಲೆಯು 1,873 ಡಾಲರ್‌ಗೆ ತಲುಪಲಿದ್ದು, ಸೋಯಾ ಎಣ್ಣೆಯ ಬೆಲೆಗಿಂತಲೂ ಹೆಚ್ಚಾಗಲಿದೆ ಎಂದು ಸನ್‌ವಿನ್‌ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಸಂದೀಪ್‌ ಬಜೋರಿಯಾ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT