ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಇ, ಬಾಂಗ್ಲಾದೇಶಕ್ಕೆ 64,400 ಟನ್‌ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ

Published 4 ಮಾರ್ಚ್ 2024, 15:17 IST
Last Updated 4 ಮಾರ್ಚ್ 2024, 15:17 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ನ್ಯಾಷನಲ್ ಕೋಆಪರೇಟಿವ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌ ಮೂಲಕ ಯುಎಇ ಮತ್ತು ಬಾಂಗ್ಲಾದೇಶಕ್ಕೆ 64,400 ಟನ್‌ ಈರುಳ್ಳಿ ರಫ್ತಿಗೆ ಅನುಮತಿ ನೀಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ತಿಳಿಸಿದೆ.

ಬಾಂಗ್ಲಾಕ್ಕೆ 50 ಸಾವಿರ ಟನ್‌ ಮತ್ತು ಯುಎಇಗೆ 14,400 ಟನ್‌ ರಫ್ತು ಮಾಡಲಾಗುತ್ತದೆ ಎಂದು ವಾಣಿಜ್ಯ ಸಚಿವಾಲಯದ ಅಧೀನದಲ್ಲಿ ಬರುವ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ. 

ದೇಶೀಯ ಮಾರುಕಟ್ಟೆಯಲ್ಲಿ ಧಾರಣೆ ನಿಯಂತ್ರಿಸಲು ಕೇಂದ್ರವು ಈರುಳ್ಳಿ ರಫ್ತಿಗೆ ಮಾರ್ಚ್‌ 31ರ ವರೆಗೆ ನಿಷೇಧ ಹೇರಿದೆ. ಆದರೆ, ಭಾರತದ ಮಿತ್ರರಾಷ್ಟ್ರಗಳಿಗೆ ರಫ್ತು ಮಾಡುವುದಕ್ಕೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ. 

2023ರ ಏಪ್ರಿಲ್‌ನಿಂದ ಅದೇ ವರ್ಷದ ಆಗಸ್ಟ್‌ವರೆಗೆ ಬಾಂಗ್ಲಾ, ಮಲೇಷ್ಯಾ ಹಾಗೂ ಯುಎಇಗೆ ಒಟ್ಟು 9.75 ಲಕ್ಷ ಟನ್‌ನಷ್ಟು ಈರುಳ್ಳಿ ರಫ್ತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT