ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಿಯಲ್‌ ಎಸ್ಟೇಟ್‌ ಪಾರದರ್ಶಕ ಸೂಚ್ಯಂಕ: ಭಾರತಕ್ಕೆ 31ನೇ ಸ್ಥಾನ

ರಿಯಲ್‌ ಎಸ್ಟೇಟ್‌ ಪಾರದರ್ಶಕ ಸೂಚ್ಯಂಕ
Published : 27 ಆಗಸ್ಟ್ 2024, 15:13 IST
Last Updated : 27 ಆಗಸ್ಟ್ 2024, 15:13 IST
ಫಾಲೋ ಮಾಡಿ
Comments

ಮುಂಬೈ: ಜಾಗತಿಕ ರಿಯಲ್‌ ಎಸ್ಟೇಟ್‌ ಪಾರದರ್ಶಕ ಸೂಚ್ಯಂಕ 2024ರಲ್ಲಿ ಭಾರತವು 31ನೇ ಸ್ಥಾನ ಪಡೆದಿದೆ ಎಂದು ಗ್ಲೋಬಲ್‌ ಪ್ರಾಪರ್ಟಿ ಕನ್ಸಲ್ಟೆನ್ಸಿ ಜೆಎಲ್‌ಎಲ್‌ ವರದಿ ತಿಳಿಸಿದೆ.

ಭಾರತದ ಟೈರ್‌ 1 ಮಾರುಕಟ್ಟೆಯು 2.44 ಅಂಕ ಪಡೆಯುವ ಮೂಲಕ ಮೊದಲ ಬಾರಿಗೆ ‘ಪಾರದರ್ಶಕ’ ವಲಯವನ್ನು ಪ್ರವೇಶಿಸಿದೆ. ಪಾರದರ್ಶಕ ಸೂಚ್ಯಂಕಗಳ 89 ರಾಷ್ಟ್ರಗಳ ಪೈಕಿ ಭಾರತದ ಸಾಧನೆಯು ಸುಧಾರಿಸಿದೆ ಎಂದು ತಿಳಿಸಿದೆ.

ಗರಿಷ್ಠ ಪಾರದರ್ಶಕ ವಲಯದಲ್ಲಿ ಯು.ಕೆ ಅಗ್ರಸ್ಥಾನದಲ್ಲಿದೆ. ಆ ನಂತರದ ಸ್ಥಾನದಲ್ಲಿ ಫ್ರಾನ್ಸ್‌, ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ನೆದರ್ಲೆಂಡ್ಸ್‌, ನ್ಯೂಜಿಲೆಂಡ್‌, ಐರ್ಲೆಂಡ್‌, ಸ್ವೀಡನ್‌, ಜರ್ಮಿನಿ, ಜಪಾನ್‌, ಬೆಲ್ಜಿಯಂ ಮತ್ತು ಸಿಂಗಪುರ ಇವೆ. 

22 ರಾಷ್ಟ್ರಗಳನ್ನು ಪಾರದರ್ಶಕ ರಾಷ್ಟ್ರಗಳೆಂದು ವರ್ಗೀಕರಿಸಲಾಗಿದೆ. ಇದರಲ್ಲಿ ಫಿನ್ಲೆಂಡ್‌ ಅಗ್ರಸ್ಥಾನದಲ್ಲಿದೆ. ಈ ವಲಯದಲ್ಲಿ ಭಾರತ ಇದೆ. ಉಳಿದ ದೇಶಗಳು ಅರೆ ಪಾರದರ್ಶಕ ಮತ್ತು ಕಡಿಮೆ ಪಾರದರ್ಶಕ ವಲಯದಲ್ಲಿವೆ. 

‘ದೇಶದಲ್ಲಿರುವ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳ ಬೆಳವಣಿಗೆ ಉತ್ತಮವಾಗಿದೆ. ರಿಯಾಲ್ಟಿ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆಯ ಹೆಚ್ಚಳಕ್ಕೆ ಒತ್ತು ನೀಡಿವೆ’ ಎಂದು ಜೆಎಲ್‌ಎಲ್‌ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಮುಖ್ಯಸ್ಥ (ಸಂಶೋಧನೆ) ಸಮಂತಕ್ ದಾಸ್ ತಿಳಿಸಿದ್ದಾರೆ.

‘ದೇಶದ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಸುಧಾರಣೆಗಾಗಿ ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆಯು ಹೂಡಿಕೆದಾರರಿಗೆ ರಕ್ಷಣೆ ನೀಡಿದೆ. ಭೂ ದಾಖಲೆಗಳ ಡಿಜಿಟಲೀಕರಣವು ಹೆಚ್ಚಿನ ಪಾರದರ್ಶಕತೆಗೆ ಒತ್ತು ನೀಡಿದೆ. ರಿಯಲ್‌ ಎಸ್ಟೇಟ್‌ ಕಂಪನಿಗಳ ನೋಂದಣಿ, ದಾಖಲೆಗಳನ್ನು ಆರ್‌ಬಿಐ ಮತ್ತು ಸೆಬಿ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುತ್ತಿವೆ. ಇದು ಈ ವಲಯದ ಬೆಳವಣಿಗೆಗೆ ಸಹಕಾರಿಯಾಗಿದೆ’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT