ನವದೆಹಲಿ: ಉಕ್ರೇನ್ ಮತ್ತು ರಷ್ಯಾ ನಡುವೆ ಸಮರ ಆರಂಭವಾದ ನಂತರದಲ್ಲಿ ಭಾರತವು ರಷ್ಯಾದಿಂದ ಅಂದಾಜು 144 ಬಿಲಿಯನ್ ಯೂರೊ (ಸರಿಸುಮಾರು ₹15.19 ಲಕ್ಷ ಕೋಟಿ) ಮೌಲ್ಯದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ ಎಂದು ಯುರೋಪಿನ ‘ಇಂಧನ ಮತ್ತು ಶುದ್ಧ ಗಾಳಿ ಕುರಿತ ಸಂಶೋಧನಾ ಕೇಂದ್ರ’ (ಸಿಆರ್ಇಎ) ಅಂದಾಜು ಮಾಡಿದೆ.

ಇದೇ ಅವಧಿಯಲ್ಲಿ ಚೀನಾ ದೇಶವು ರಷ್ಯಾದಿಂದ ಅಂದಾಜು 210 ಬಿಲಿಯನ್ ಯೂರೊ ಮೌಲ್ಯದ (ಸರಿಸುಮಾರು ₹22.16 ಲಕ್ಷ ಕೋಟಿ) ಕಚ್ಚಾ ತೈಲವನ್ನು ಖರೀದಿಸಿದೆ.

ಭಾರತವು ರಷ್ಯಾದಿಂದ ಕಚ್ಚಾ ತೈಲ ಮಾತ್ರವೇ ಅಲ್ಲದೆ 18.18 ಬಿಲಿಯನ್ ಯೂರೊ (ಸರಿಸುಮಾರು ₹1.91 ಲಕ್ಷ ಕೋಟಿ) ಮೌಲ್ಯದ ಕಲ್ಲಿದ್ದಲನ್ನು ಖರೀದಿಸಿದೆ. ಚೀನಾ ಕೂಡ ರಷ್ಯಾದಿಂದ ಕಲ್ಲಿದ್ದಲು ಹಾಗೂ ಅನಿಲವನ್ನು ಖರೀದಿಸಿದೆ.

ಇದೇ ಅವಧಿಯಲ್ಲಿ ಐರೋಪ್ಯ ಒಕ್ಕೂಟವು ರಷ್ಯಾದಿಂದ ಒಟ್ಟು 218.1 ಬಿಲಿಯನ್ ಯೂರೊ (ಸರಿಸುಮಾರು ₹23.02 ಲಕ್ಷ ಕೋಟಿ) ಮೌಲ್ಯದ ಪಳೆಯುಳಿಕೆ ಇಂಧನವನ್ನು (ಕಲ್ಲಿದ್ದಲು, ತೈಲ ಮತ್ತು ಅನಿಲ) ಖರೀದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.