ನವದೆಹಲಿ : ‘ದೇಶದ ಸೇವಾ ವಲಯದ ಬೆಳವಣಿಗೆ ಜನವರಿ ತಿಂಗಳಿನಲ್ಲಿ ಎರಡು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ’ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷಾ ವರದಿ ತಿಳಿಸಿದೆ.

ಎಚ್ಎಸ್ಬಿಸಿ ಇಂಡಿಯಾ ಸರ್ವಿಸಸ್ ಪಿಎಂಐ ಬ್ಯುಸಿನೆಸ್ ಆ್ಯಕ್ಟಿವಿಟಿ ಸೂಚ್ಯಂಕವು 2025ರ ಡಿಸೆಂಬರ್ನಲ್ಲಿ 58 ಆಗಿತ್ತು. ಅದು ಜನವರಿಯಲ್ಲಿ 58.5ಕ್ಕೆ ಏರಿಕೆ ಆಗಿದೆ.

ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿದ್ದರೆ ಅದನ್ನು ಬೆಳವಣಿಗೆ ಎಂದು, 50ಕ್ಕಿಂತ ಕೆಳಕ್ಕೆ ಬಂದರೆ ಅದನ್ನು ಕುಸಿತ ಎಂದು ಪರಿಗಣಿಸಲಾಗುತ್ತದೆ.

‘ಜನವರಿಯಲ್ಲಿ ಸೇವಾ ವಲಯವು ಬೆಳವಣಿಗೆ ದಾಖಲಿಸಿದೆ. ದಕ್ಷಿಣ ಮತ್ತು ಆಗ್ನೇಯ ಏಷ್ಯಾದಿಂದ ಹೆಚ್ಚಿದ ಅಂತರರಾಷ್ಟ್ರೀಯ ಬೇಡಿಕೆ ಸೇರಿದಂತೆ ಹೊಸ ಕಾರ್ಯಾದೇಶಗಳು ಉತ್ಪಾದನೆಯ ಬೆಳವಣಿಗೆಗೆ ಕಾರಣವಾದವು’ ಎಂದು ಎಚ್ಎಸ್ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಲ್ ಭಂಡಾರಿ ತಿಳಿಸಿದ್ದಾರೆ.

ದೇಶದಲ್ಲಿನ ಸೇವಾ ಪೂರೈಕೆದಾರರು ಹೊಸ ವ್ಯವಹಾರ ಮತ್ತು ಉತ್ಪಾದನೆಯಲ್ಲಿ ವೇಗದ ಬೆಳವಣಿಗೆ ಕಂಡಿದ್ದಾರೆ. ಇದರಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕಂಪನಿಗಳು ನೇಮಿಸಿಕೊಂಡವು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.