ನವದೆಹಲಿ: ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್ಟಿಎ) ಮುಂದಿನ ವಾರ ಸಹಿ ಬೀಳುವ ನಿರೀಕ್ಷೆ ಇದೆ ಎಂದು ಸರ್ಕಾರದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ. ಮೇ 6ರಂದು ವ್ಯಾಪಾರ ಮಾತುಕತೆಗಳು ಪೂರ್ಣಗೊಂಡಿವೆ.

ಈ ಒಪ್ಪಂದದಿಂದ ಬ್ರಿಟನ್ನಿನಲ್ಲಿ ಮಾರಾಟ ಆಗುವ ದೇಶದ ಚರ್ಮ ಉತ್ಪನ್ನಗಳು, ಪಾದರಕ್ಷೆಗಳು ಮತ್ತು ಜವಳಿ ಉತ್ಪನ್ನಗಳ ಮೇಲಿನ ರಫ್ತು ಸುಂಕ ಕಡಿಮೆಯಾಗಲಿದೆ. ಬ್ರಿಟನ್ನಿಂದ ಆಮದು ಮಾಡಿಕೊಳ್ಳುವ ವಿಸ್ಕಿ, ಕಾರುಗಳು ಅಗ್ಗವಾಗಲಿವೆ. ಈ ಒಪ್ಪಂದದಿಂದ ಉಭಯ ದೇಶಗಳ ನಡುವಿನ ವ್ಯಾಪಾರವು 2030ರ ವೇಳೆಗೆ ₹10.33 ಲಕ್ಷ ಕೋಟಿ (120 ಬಿಲಿಯನ್ ಡಾಲರ್) ಆಗಲಿದೆ ಎಂದು ಹೇಳಿದ್ದಾರೆ.

ಎಫ್ಟಿಎಗೆ ಸಹಿ ಬಿದ್ದರೆ, ಇದರ ಜಾರಿಗೆ ಬ್ರಿಟನ್ ಸಂಸತ್ತು ಮತ್ತು ಭಾರತದ ಸಚಿವ ಸಂಪುಟದ ಅನುಮೋದನೆ ಬೇಕಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.