ಸೋಮವಾರ, ಜನವರಿ 20, 2020
18 °C
ಎನ್‌ಪಿಎ ಸೃಷ್ಟಿಸಿರುವ ಬಿಕ್ಕಟ್ಟಿನಿಂದ ಕಂಟಕ: ಅಮೆರಿಕದ ಅರ್ಥಶಾಸ್ತ್ರಜ್ಞ ಅಭಿಪ್ರಾಯ

ಶೇ 5ರಷ್ಟು ಜಿಡಿಪಿ ಸಾಧಿಸುವುದು ಸುಲಭವಲ್ಲ: ಅರ್ಥಶಾಸ್ತ್ರಜ್ಞ ಸ್ಟೀವ್‌ ಹೇಂಕ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಭಾರತವು 2020ರಲ್ಲಿ ಶೇ 5ರಷ್ಟು ಆರ್ಥಿಕ ವೃದ್ಧಿ ದರ ಸಾಧಿಸಲು ಭಾರಿ ಪರಿಶ್ರಮ ಪಡಬೇಕಾಗುತ್ತದೆ’ ಎಂದು ಅಮೆರಿಕದ ಅರ್ಥಶಾಸ್ತ್ರಜ್ಞ ಸ್ಟೀವ್‌ ಹೇಂಕ್‌ ವಿಶ್ಲೇಷಿಸಿದ್ದಾರೆ.

‘ಬ್ಯಾಂಕ್‌ಗಳ ವಸೂಲಾಗದ ಸಾಲವು (ಎನ್‌ಪಿಎ) ಸೃಷ್ಟಿಸಿರುವ ಬಿಕ್ಕಟ್ಟಿನ ಕಾರಣಕ್ಕೆ ಶೇ 5ರಷ್ಟು ಆರ್ಥಿಕ ಪ್ರಗತಿ ಸಾಧಿಸುವುದೂ ಪ್ರಯಾಸಕರವಾಗಿರಲಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಕೆಲ ವರ್ಷಗಳ ಹಿಂದೆ ಬೇಕಾಬಿಟ್ಟಿಯಾಗಿ ಮಂಜೂರು ಮಾಡಿದ ಸಾಲದ ಪ್ರತಿಕೂಲ ಪರಿಣಾಮಗಳು ಈಗ ‘ಎನ್‌ಪಿಎ’ ರೂಪದಲ್ಲಿ ಆರ್ಥಿಕತೆಗೆ ಕಂಟಕಗಳಾಗಿ ಪರಿಣಮಿಸಿವೆ’ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಮಂದಗತಿಯ ಆರ್ಥಿಕ ಪ್ರಗತಿಯು ಮುಖ್ಯವಾಗಿ ‘ಎನ್‌ಪಿಎ’ ಬಿಕ್ಕಟ್ಟಿನಿಂದ ಉದ್ಭವಿಸಿದೆ. ಆರ್ಥಿಕತೆಯ ಎಲ್ಲ ವಲಯಗಳಲ್ಲಿನ ಕುಸಿತದ ಬಿಕ್ಕಟ್ಟು ಇದಲ್ಲ. ಅದೊಂದು ಆವರ್ತಕ ಸಮಸ್ಯೆಯಾಗಿದೆ.

‘ಅಗತ್ಯ ಇರುವಷ್ಟು ಸಾಲ ದೊರೆಯದೆ ಬಂಡವಾಳ ಹೂಡಿಕೆ ಕುಸಿತಗೊಂಡಿದೆ. ಅದರಿಂದ ಸರಕು ಮತ್ತು ಸೇವೆಗಳ ಬೇಡಿಕೆಯೂ ಕಡಿಮೆಯಾಗಿದೆ. ಉದ್ಯೋಗ ಅವಕಾಶಗಳು ಕಡಿಮೆಯಾಗಿರುವುದು ಮತ್ತು ಗ್ರಾಮೀಣ ಪ್ರದೇಶದ ಜನರು ಎದುರಿಸುವ ಸಂಕಷ್ಟಗಳು ಪರಿಸ್ಥಿತಿಯನ್ನು ವಿಷಮಗೊಳಿಸಿವೆ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು