ಮಂಗಳವಾರ, ಮಾರ್ಚ್ 28, 2023
31 °C

ಹಬ್ಬದ ಬೇಡಿಕೆ: ಕಂಪನಿಗಳ ನಿವ್ವಳ ಲಾಭ ಏರಿಕೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ₹ 818 ಕೋಟಿಗೂ ಹೆಚ್ಚಿನ ಮಾರುಕಟ್ಟೆ ಮೌಲ್ಯ ಹೊಂದಿರುವ ಭಾರತದ 191 ಕಂಪನಿಗಳ ಪೈಕಿ 118 ಕಂಪನಿಗಳ ನಿವ್ವಳ ಲಾಭವು ಎರಡನೇ ತ್ರೈಮಾಸಿಕದಲ್ಲಿ ಏರಿಕೆ ಆಗಿದೆ. ರಿಫಿನಿಟಿವ್‌ ಕಂಪನಿಯು ನೀಡಿರುವ ಅಂಕಿ–ಅಂಶಗಳ ಪ್ರಕಾರ, ಶೇಕಡ 90ರಷ್ಟು ಕಂಪನಿಗಳ ತ್ರೈಮಾಸಿಕ ವರಮಾನದಲ್ಲಿಯೂ ಏರಿಕೆ ಕಂಡುಬಂದಿದೆ.

ದೇಶವು ಎರಡು ವರ್ಷಗಳ ಬಳಿಕ ಕೋವಿಡ್‌ ನಿರ್ಬಂಧಗಳು ಇಲ್ಲದೇ ಹಬ್ಬದ ಋತುವನ್ನು ಆಚರಣೆ ಮಾಡಿರು
ವುದರಿಂದ ಉಡುಪುಗಳ ರಿಟೇಲ್‌ ಮಾರಾಟಗಾರರು, ರೆಸ್ಟಾರೆಂಟ್‌ಗಳು, ಬ್ಯಾಂಕ್‌ಗಳು, ನಿರ್ಮಾಣ ಕಂಪನಿಗಳ ಮಾರಾಟ ಹೆಚ್ಚಾಗಿದೆ.

ಬೆಲೆಯು ಗರಿಷ್ಠ ಮಟ್ಟದಲ್ಲಿ ಇದ್ದರೂ ಗ್ರಾಹಕರು ಆಹಾರ ಮತ್ತು ಇತರೆ ವಸ್ತುಗಳನ್ನು ಖರೀದಿಸಿದ್ದಾರೆ. ಹಬ್ಬದ ಋತುವಿನ ಬೇಡಿಕೆಯು ಕಂಪನಿಗಳ ತ್ರೈಮಾಸಿಕದ ಗಳಿಕೆ ಮೇಲೆ ಪ್ರಭಾವ ಬೀರಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ ಎಂದು ಕ್ಯಾಂಟೆಕೊ ರಿಸರ್ಚ್‌ನ ಅರ್ಥಶಾಸ್ತ್ರಜ್ಞ ವಿವೇಕ್‌ ಕುಮಾರ್‌ ಹೇಳಿದ್ದಾರೆ.

ಸರ್ಕಾರದ ಅಂಕಿ–ಅಂಶಗಳ ಪ್ರಕಾರ, ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ದೇಶದ ಬಂಡವಾಳ ವೆಚ್ಚವು ಕಳೆದ ವರ್ಷಕ್ಕಿಂತ ಶೇ 50ರಷ್ಟು ಹೆಚ್ಚಾಗಿ ₹ 3.43 ಲಕ್ಷ ಕೋಟಿಗೆ ತಲುಪಿದೆ.

ರೆಸ್ಟಾರೆಂಟ್‌ಗಳ ವರಮಾನವು ಕಳೆದ ವರ್ಷದ ಮಟ್ಟಕ್ಕೆ ಹೋಲಿಸಿದರೆ ಈ ಬಾರಿ ಶೇ 90ಕ್ಕೂ ಹೆಚ್ಚು ಏರಿಕೆ ಕಂಡಿದೆ. ಬಟ್ಟೆ, ವಿದ್ಯುತ್‌, ನಿರ್ಮಾಣ, ರಾಸಾಯನಿಕ, ಬ್ಯಾಂಕ್‌ ಮತ್ತು ಆಟೊ ಕಂಪನಿಗಳ ವರಮಾನವು ಹೆಚ್ಚಾಗಿದೆ ಎಂದು ರಿಫಿನಿಟಿವ್‌ ಮಾಹಿತಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು