ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ‘ಕಾರ್ಮಿಕ ವಿರೋಧಿ’ ನೀತಿಗಳನ್ನು ಅನುಸರಿಸುತ್ತಿದೆ ಎಂದು ದೂರಿ, ನೀತಿಗಳ ವಿರುದ್ಧ ಪ್ರತಿಭಟಿಸಲು ಕರೆ ನೀಡಿದ್ದ ಭಾರತ್ ಬಂದ್ನಲ್ಲಿ ಅಂದಾಜು 25 ಕೋಟಿ ಕಾರ್ಮಿಕರು ಭಾಗಿಯಾಗಿದ್ದರು ಎಂದು ಸಂಘಟನೆಗಳು ಹೇಳಿವೆ.

ಕೇರಳದಲ್ಲಿ ಬಂದ್ ಯಶಸ್ಸು ಕಂಡಿದೆ, ಪಶ್ಚಿಮ ಬಂಗಾಳದಲ್ಲಿ ಅಲ್ಲಲ್ಲಿ ಹಿಂಸಾಚಾರ ನಡೆದಿದೆ. ಆರ್ಎಸ್ಎಸ್ನ ಕಾರ್ಮಿಕ ಸಂಘಟನೆಯಾದ ಭಾರತೀಯ ಮಜ್ದೂರ್ ಸಂಘವು ಬಂದ್ನಲ್ಲಿ ಭಾಗಿಯಾಗಿರಲಿಲ್ಲ.

ಕಲ್ಲಿದ್ದಲು, ಬ್ಯಾಂಕಿಂಗ್, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಮತ್ತು ಕೈಗಾರಿಕಾ ವಲಯಗಳ ಮೇಲೆ ಬಂದ್ನಿಂದಾಗಿ ಪರಿಣಾಮ ಉಂಟಾಗಿದೆ ಎಂದು ಕಾರ್ಮಿಕ ಸಂಘಟನೆಗಳು ಹೇಳಿವೆ.

ರಸ್ತೆ ತಡೆ, ರೈಲು ತಡೆಯಂತಹ ಪ್ರತಿಭಟನೆಗಳಲ್ಲಿ ಕಾರ್ಮಿಕರು ಭಾಗಿಯಾಗಿದ್ದರು ಎಂದು ಸಂಘಟನೆಗಳು ಹೇಳಿವೆ. ಅಸಂಘಟಿತ ವಲಯದ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತ ರೈತರು ಕೂಡ ಭಾಗಿಯಾದ್ದರು ಎಂದು ತಿಳಿಸಿವೆ.

ದೆಹಲಿಯಲ್ಲಿ ಮಾರುಕಟ್ಟೆಗಳು ತೆರೆದಿದ್ದವು. ಜಾರ್ಖಂಡ್ನಲ್ಲಿ ಕಲ್ಲಿದ್ದಲು, ಬ್ಯಾಂಕಿಂಗ್ ಮತ್ತು ಇತರ ವಲಯಗಳಲ್ಲಿ ಚಟುವಟಿಕೆಗಳಿಗೆ ಧಕ್ಕೆ ಆಗಿದೆ ಎಂದು ಕಾರ್ಮಿಕರ ಸಂಘಟನೆಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.