ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ಗೆ ₹13,750 ಕೋಟಿ ಲಾಭ

Published 28 ಜುಲೈ 2023, 14:26 IST
Last Updated 28 ಜುಲೈ 2023, 14:26 IST
ಅಕ್ಷರ ಗಾತ್ರ

ನವದೆಹಲಿ: ತೈಲೋತ್ಪನ್ನ ವಲಯದ ದೇಶದ ಪ್ರಮುಖ ಕಂಪನಿ ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ (ಐಒಸಿ) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹13,750 ಕೋಟಿಗೆ ತಲುಪಿದೆ.

ಜೂನ್‌ ತ್ರೈಮಾಸಿಕದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಕಂಡಿದ್ದರೂ ಕಂಪನಿಯು ಮಾರಾಟ ದರದಲ್ಲಿ ಪರಿಷ್ಕರಣೆ ಮಾಡಿರಲಿಲ್ಲ. ಹೀಗಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟದಿಂದ ಬರುವ ಗಳಿಕೆ ಹೆಚ್ಚಾಯಿತು. ಇದು ಈ ಪ್ರಮಾಣದ ಲಾಭ ಗಳಿಸಲು ಕಾರಣವಾಗಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹1,992.53 ಕೋಟಿಯಷ್ಟು ನಷ್ಟ ಅನುಭವಿಸಿತ್ತು. ಮಾರ್ಚ್‌ ತ್ರೈಮಾಸಿಕದಲ್ಲಿ ಆಗಿದ್ದ ಲಾಭಕ್ಕೆ ಹೋಲಿಸಿದರೆ (₹10,058 ಕೋಟಿ) ಶೇ 37ರಷ್ಟು ಏರಿಕೆ ಕಂಡುಬಂದಿದೆ ಎಂದು ಐಒಸಿ ಷೇರುಪೇಟೆಗೆ ಮಾಹಿತಿ ನೀಡಿದೆ. 2021ರ ಏಪ್ರಿಲ್‌ನಿಂದ 2022ರ ಮಾರ್ಚ್ ಅವಧಿಯಲ್ಲಿ ಆಗಿದ್ದ ₹24,184 ಕೋಟಿಯಷ್ಟು ಲಾಭದ ಅರ್ಧದಷ್ಟು ಲಾಭ ಈ ತ್ರೈಮಾಸಿಕದಲ್ಲಿ ಆಗಿದೆ. ಕಾರ್ಯಾಚರಣೆ ವರಮಾನವು ಶೇ 2.36ರಷ್ಟು ಇಳಿಕೆ ಕಂಡಿದ್ದು ₹2.21 ಲಕ್ಷ ಕೋಟಿಗೆ ತಲುಪಿದೆ.

ಬಿಪಿಸಿಎಲ್‌ ಕಂಪನಿಯು ಜೂನ್‌ ತ್ರೈಮಾಸಿಕದಲ್ಲಿ ₹10,644 ಕೋಟಿ ನಿವ್ವಳ ಲಾಭ ಗಳಿಸಿದೆ. ಎಚ್‌ಪಿಸಿಎಲ್‌ ಆರ್ಥಿಕ ಸಾಧನೆಯ ವರದಿಯನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ.

ನೆಸ್ಲೆ ಇಂಡಿಯಾ
₹4200 ಕೋಟಿ ಹೂಡಿಕೆ ಎಫ್‌ಎಂಸಿಜಿ ಕಂಪನಿ ನೆಸ್ಲೆ ಇಂಡಿಯಾ ಭಾರತದಲ್ಲಿ 2025ರ ಒಳಗಾಗಿ ₹4200 ಕೋಟಿ ಹೂಡಿಕೆ ಮಾಡಲಿದ್ದು ಒಡಿಶಾದಲ್ಲಿ 10ನೇ ತಯಾರಿಕಾ ಘಟಕವನ್ನೂ ತೆರೆಯಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣನ್‌ ಶುಕ್ರವಾರ ತಿಳಿಸಿದ್ದಾರೆ. 2023 ರಿಂದ 2025 ಅವಧಿಯಲ್ಲಿ ಒಟ್ಟು ₹4200 ಕೋಟಿ ಹೂಡಿಕೆ ಮಾಡಲು ಉದ್ದೇಶಿಸಲಾಗಿದೆ. ಅದರಲ್ಲಿ ₹900 ಕೋಟಿ ಮೊತ್ತದ ಹೊಸ ಘಟಕವು ಒಡಿಶಾದಲ್ಲಿ ಸ್ಥಾಪನೆ ಆಗಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT