ಶನಿವಾರ, ಜುಲೈ 2, 2022
25 °C

ಜಿಡಿಪಿ ಬೆಳವಣಿಗೆ ಅಂದಾಜು ಶೇ 4.6ಕ್ಕೆ ತಗ್ಗಿಸಿದ ವಿಶ್ವಸಂಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: 2022ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು ಶೇಕಡ 4.6ರಷ್ಟು ಮಾತ್ರ ಇರಲಿದೆ ಎಂದು ವಿಶ್ವಸಂಸ್ಥೆ ಅಂದಾಜು ಮಾಡಿದೆ. ಈ ಮೊದಲು ಮಾಡಿದ್ದ ಅಂದಾಜು ಬೆಳವಣಿಗೆ ಪ್ರಮಾಣಕ್ಕಿಂತ ಇದು ಶೇ 2.1ರಷ್ಟು ಕಡಿಮೆ.

ರಷ್ಯಾ–ಉಕ್ರೇನ್ ಯುದ್ಧದ ಪರಿಣಾಮಗಳಿಂದಾಗಿ ಬೆಳವಣಿಗೆ ಪ್ರಮಾಣ ತಗ್ಗಲಿದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮಾವೇಶ (ಯುಎನ್‌ಸಿಟಿಎಡಿ) ವರದಿ ಹೇಳಿದೆ. ವಿಶ್ವದ ಆರ್ಥಿಕ ಬೆಳವಣಿಗೆ ದರವು ಶೇ 2.6ರಷ್ಟು ಇರಲಿದೆ ಎಂದು ವರದಿ ಅಂದಾಜು ಮಾಡಿದೆ.

ರಷ್ಯಾದ ಅರ್ಥ ವ್ಯವಸ್ಥೆಯು ಈ ವರ್ಷದಲ್ಲಿ ತೀವ್ರ ಪ್ರಮಾಣದ ಹಿಂಜರಿತವನ್ನು ಕಾಣಲಿದೆ. ಯುರೋಪಿನ ಪಶ್ಚಿಮ ಭಾಗದ ಕೆಲವು ದೇಶಗಳಲ್ಲಿ, ದಕ್ಷಿಣ, ಮಧ್ಯ ಹಾಗೂ ಆಗ್ನೇಯ ಏಷ್ಯಾದ ಕೆಲವು ದೇಶಗಳಲ್ಲಿ ಸಹ ಬೆಳವಣಿಗೆ ಪ್ರಮಾಣ ಕುಸಿಯಲಿದೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು