ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಆಮದು ಶೇ 8ರಷ್ಟು ಹೆಚ್ಚಳ

Published 12 ಮೇ 2024, 15:10 IST
Last Updated 12 ಮೇ 2024, 15:10 IST
ಅಕ್ಷರ ಗಾತ್ರ

ನವದೆಹಲಿ: 2023–24ನೇ ಹಣಕಾಸು ವರ್ಷದಲ್ಲಿ ಭಾರತವು 26.82 ಕೋಟಿ ಟನ್‌ನಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ.

2022–23ರಲ್ಲಿ 24.90 ಕೋಟಿ ಟನ್ ಆಮದಾಗಿತ್ತು. ಇದಕ್ಕೆ ಹೋಲಿಸಿದರೆ ಶೇ 7.7ರಷ್ಟು ಏರಿಕೆಯಾಗಿದೆ ಎಂದು ಇ–ವಾಣಿಜ್ಯ ಸಂಸ್ಥೆ ಎಂ-ಜಂಕ್ಷನ್‌ ಸರ್ವಿಸಸ್‌ ಲಿಮಿಟೆಡ್‌ ತಿಳಿಸಿದೆ.

2023–24ನೇ ಆರ್ಥಿಕ ವರ್ಷದ ಮಾರ್ಚ್‌ನಲ್ಲಿ 2.39 ಕೋಟಿ ಟನ್‌ ಕಲ್ಲಿದ್ದಲು ಆಮದಾಗಿತ್ತು. ಹಿಂದಿನ ಆರ್ಥಿಕ ವರ್ಷದ ಮಾರ್ಚ್‌ನಲ್ಲಿ 2.11 ಕೋಟಿ ಟನ್‌ ಆಮದಾಗಿತ್ತು. 

2023–24ರ ಪೂರ್ಣ ಹಣಕಾಸು ವರ್ಷದಲ್ಲಿ 17.59 ಕೋಟಿ ಟನ್‌ ಕೋಕಿಂಗೇತರ ಕಲ್ಲಿದ್ದಲು ಆಮದಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 16.24 ಕೋಟಿ ಟನ್‌ನಷ್ಟಿತ್ತು. ಕೋಕಿಂಗ್‌ ಕಲ್ಲಿದ್ದಲು 5.44 ಕೋಟಿ ಟನ್‌ನಿಂದ 5.72 ಕೋಟಿ ಟನ್‌ಗೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಸಮುದ್ರ ಮಾರ್ಗದ ಸಾಗಣೆ ವೆಚ್ಚದಲ್ಲಿ ಇಳಿಕೆ ಮತ್ತು ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿಂದ ಕಲ್ಲಿದ್ದಲು ಆಮದು ಪ್ರಮಾಣದಲ್ಲಿ ಏರಿಕೆಯಾಗಿದೆ. ಆದಾಗ್ಯೂ, ಮಾರುಕಟ್ಟೆಯಲ್ಲಿ ದೇಶೀಯ ಕಲ್ಲಿದ್ದಲು ಸಾಕಷ್ಟು ಲಭ್ಯತೆಯಿದೆ. ಮುಂದಿನ ದಿನಗಳಲ್ಲಿ ಆಮದು ಬೇಡಿಕೆ ಸದೃಢವಾಗಿ ಉಳಿಯಲಿದೆ ಎಂದು ಎಂ–ಜಂಕ್ಷನ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿನಯ್‌ ವರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT