ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳ: ಆರ್‌ಬಿಐ

Published 5 ಜನವರಿ 2024, 16:15 IST
Last Updated 5 ಜನವರಿ 2024, 16:15 IST
ಅಕ್ಷರ ಗಾತ್ರ

ಮುಂಬೈ: ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಡಿಸೆಂಬರ್‌ 29ಕ್ಕೆ ಕೊನೆಗೊಂಡ ವಾರದ ವಹಿವಾಟಿನಲ್ಲಿ ₹22,936 ಕೋಟಿ ಹೆಚ್ಚಾಗಿದ್ದು, ₹51.81 ಲಕ್ಷ ಕೋಟಿಗೆ ತಲುಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ಶುಕ್ರವಾರ ತಿಳಿಸಿದೆ.

2021ರ ಅಕ್ಟೋಬರ್‌ನಲ್ಲಿ ₹53.62 ಲಕ್ಷ ಕೋಟಿಗೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಬರೆದಿತ್ತು.  

ಡಿಸೆಂಬರ್‌ನಲ್ಲಿ ವಿದೇಶಿ ಕರೆನ್ಸಿ ಆಸ್ತಿಗಳೇ ಮೀಸಲು ಸಂಗ್ರಹದ ಪ್ರಮುಖ ಅಂಶವಾಗಿದ್ದು, ₹15,537 ಕೋಟಿಯಿಂದ ₹45.85 ಲಕ್ಷ ಕೋಟಿಗೆ ಹೆಚ್ಚಳವಾಗಿದೆ ಎಂದು ಆರ್‌ಬಿಐನ ಅಂಕಿ–ಅಂಶ ತಿಳಿಸಿವೆ.

ಚಿನ್ನದ ಸಂಗ್ರಹವು ₹7,091 ಕೋಟಿಯಿಂದ ₹4 ಲಕ್ಷ ಕೋಟಿಗೆ ಏರಿಕೆ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗಿನ (ಐಎಂಎಫ್‌) ಭಾರತದ ಮೀಸಲು ₹16.62 ಕೋಟಿಗೆ ಇಳಿದು, ₹40,664 ಕೋಟಿಗೆ ತಲುಪಿದೆ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT