ಗುರುವಾರ , ಮೇ 13, 2021
24 °C

ಶೇ 9.1ರಷ್ಟು ಕುಸಿದ ತೈಲ ಬಳಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಭಾರತದ ತೈಲ ಬೇಡಿಕೆಯು ಶೇಕಡ 9.1ರಷ್ಟು ಕಡಿಮೆ ಆಗಿದೆ. 1998–99ರ ನಂತರ ಇಷ್ಟು ಪ್ರಮಾಣದಲ್ಲಿ ಬೇಡಿಕೆ ಕಡಿಮೆ ಆಗಿರುವುದು ಇದೇ ಮೊದಲು. ಬೇಡಿಕೆ ಕಡಿಮೆ ಆಗಲು ಪ್ರಮುಖ ಕಾರಣ ಲಾಕ್‌ಡೌನ್‌.

2020–21ರಲ್ಲಿ ದೇಶದಲ್ಲಿ ಒಟ್ಟು 19.46 ಕೋಟಿ ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸಲಾಗಿದೆ. ಹಿಂದಿನ ವರ್ಷದಲ್ಲಿ 21.41 ಕೋಟಿ ಟನ್ ಬಳಕೆ ಆಗಿತ್ತು.

ಡೀಸೆಲ್‌ ಬೇಡಿಕೆಯಲ್ಲಿ ಶೇ 12ರಷ್ಟು, ಪೆಟ್ರೋಲ್ ಬೇಡಿಕೆಯಲ್ಲಿ ಶೇ 6.7ರಷ್ಟು ಇಳಿಕೆ ಆಗಿದೆ. ವಿಮಾನ ಇಂಧನ ಬಳಕೆಯಲ್ಲಿ ಶೇ 53.6ರಷ್ಟು ಇಳಿಕೆ ಆಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.