ಬೆಂಗಳೂರು: ಶತಕವೀರ ಮಾನಸ್ ಎಂ.ದವೆ (184, 245ಎ) ಅವರು ಕೊನೆಯ ವಿಕೆಟ್ಗೆ ಶತಕದ ಜೊತೆಯಾಟವಾಡಿ ಗುಜರಾತ್ನ ಮೊದಲ ಇನಿಂಗ್ಸ್ ಮೊತ್ತವನ್ನು 451 ರನ್ಗಳಿಗೆ ಬೆಳೆಸಿದರು. ಕೂಚ್ಬಿಹಾರ್ ಟ್ರೋಫಿ ಎಲೀಟ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕರ್ನಾಟಕ ಹೋರಾಟ ತೋರಿದ್ದು ಎರಡನೇ ದಿನದಾಟ ಮುಗಿದಾಗ 3 ವಿಕೆಟ್ಗೆ 160 ರನ್ ಗಳಿಸಿದೆ.

ವಲ್ಸಾಡ್ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ 9 ವಿಕೆಟ್ಗೆ 348 ರನ್ಗಳೊಡನೆ ಶುಕ್ರವಾರ ಎರಡನೇ ದಿನದಾಟ ಮುಂದುವರಿಸಿದ ಗುಜರಾತ್ ಆ ಮೊತ್ತಕ್ಕೆ 103 ರನ್ ಸೇರಿಸಿ ಕರ್ನಾಟಕ ಬೌಲರ್ಗಳನ್ನು ಹತಾಶಗೊಳಿಸಿತು. ಬರೋಬರಿ 100 ರನ್ ಗಳಿಸಿದ್ದ ದವೆ, ಕೊನೆಯ ವಿಕೆಟ್ಗೆ 218 ಎಸೆತಗಳಲ್ಲಿ 147 ರನ್ ಸೇರಿಸಿ ಕೊನೆಯವರಾಗಿ ನಿರ್ಗಮಿಸಿದರು. ಕೊನೆಯ ಆಟಗಾರ ದೈವಿಕ್ ಶಾ ಅಜೇಯ 13 ರನ್ ಮಾತ್ರ ಗಳಿಸಿದ್ದರೂ, 78 ಎಸೆತಗಳನ್ನು ಆಡಿ ಮಾನಸ್ಗೆ ಬೆಂಬಲ ನೀಡಿದರು.

ಧ್ರುವ್ ಕೃಷ್ಣನ್ (82, 124ಎ, 4x13, 6x1) ಮತ್ತು ಆದೇಶ್ ಡಿ ಅರಸ್ ಜೋಡಿ ಮೊದಲ ವಿಕೆಟ್ಗೆ 125 (278 ಎಸೆತ) ರನ್ ಸೇರಿಸಿ ಕರ್ನಾಟಕಕ್ಕೆ ಉತ್ತಮ ಆರಂಭ ಹಾಕಿಕೊಟ್ಟರು. ಆದರೆ ನಂತರ 14 ರನ್ಗಳ ಅಂತರದಲ್ಲಿ ಮೂವರು ಬ್ಯಾಟರ್ಗಳನ್ನು ಕಳೆದುಕೊಂಡಿತು. ನಾಯಕ–ವಿಕೆಟ್ ಕೀಪರ್ ಅನ್ವಯ್ ದ್ರಾವಿಡ್ (ಔಟಾಗದೇ 9) ಮತ್ತು ವರುಣ್ ಪಟೇಲ್ (ಔಟಾಗದೇ 11) ಕುಸಿತ ತಡೆದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್:

ಗುಜರಾತ್: 117.4 ಓವರುಗಳಲ್ಲಿ 451 (ಮಲಯ್ ವಿ. ಶಾ 78, ಮೌಲ್ಯರಾಜಸಿನ್ಹ ಛಾವ್ಡಾ 41, ಮಾನಸ್ ಎಂ.ದವೆ 184, ಕಾವ್ಯ ಪಿ.ಪಟೇಲ್ 43; ವೈಭವ್ ಶರ್ಮಾ 55ಕ್ಕೆ2, ಈಶ ಪುತ್ತಿಗೆ 56ಕ್ಕೆ2, ಧ್ಯಾನ್ ಎಂ.ಹಿರೇಮಠ 98ಕ್ಕೆ2, ರತನ್ ಬಿ.ಆರ್. 120 ಕ್ಕೆ4);

ಕರ್ನಾಟಕ: 60 ಓವರುಗಳಲ್ಲಿ 3 ವಿಕೆಟ್ಗೆ 160 (ಧ್ರುವ್ ಕೃಷ್ಣನ್ 82, ಆದೇಶ್ ಡಿ.ಅರಸ್ 39; ರುದ್ರ ಪಟೇಲ್ 45ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.