ನವದೆಹಲಿ: ತಾಳೆ ಎಣ್ಣೆ ಆಮದು ಪ್ರಮಾಣವು ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ ಶೇಕಡ 43.55ರಷ್ಟು ಕಡಿಮೆ ಆಗಿದೆ ಎಂದು ಸಾಲ್ವೆಂಟ್ ಎಕ್ಸ್ಟ್ರ್ಯಾಕ್ಟರ್ಸ್ ಅಸೋಸಿಯೇಷನ್ (ಎಸ್ಇಎ) ಸೋಮವಾರ ತಿಳಿಸಿದೆ.

ಈ ವರ್ಷದ ಜುಲೈನಲ್ಲಿ 4.65 ಲಕ್ಷ ಟನ್ ತಾಳೆ ಎಣ್ಣೆ ಆಮದಾಗಿದೆ. ಕಳೆದ ವರ್ಷದ ಜುಲೈನಲ್ಲಿ 8.24 ಲಕ್ಷ ಟನ್ ಆಮದಾಗಿತ್ತು. ದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಾಳೆ ಎಣ್ಣೆ ದಾಸ್ತಾನು ಇರುವುದರಿಂದ ಆಮದು ತಗ್ಗಿದೆ ಎಂದು ಎಸ್ಇಎ ತಿಳಿಸಿದೆ.

ಕಚ್ಚಾ ತಾಳೆ ಎಣ್ಣೆ ಆಮದು ಪ್ರಮಾಣವು 8.20 ಲಕ್ಷ ಟನ್ಗಳಿಂದ 4.51 ಲಕ್ಷ ಟನ್ಗೆ ಇಳಿಕೆಯಾಗಿದೆ.

ಸೋಯಾಬಿನ್ ಎಣ್ಣೆ ಆಮದು 4.84 ಲಕ್ಷ ಟನ್ನಿಂದ 3.79 ಲಕ್ಷ ಟನ್ಗೆ ಇಳಿದಿದೆ. ಅದೇ ರೀತಿ ಸೂರ್ಯಕಾಂತಿ ಎಣ್ಣೆ ಆಮದು ಸಹ ಕಳೆದ ವರ್ಷ 2.08 ಲಕ್ಷ ಟನ್ ಇದ್ದಿದ್ದು ಈ ವರ್ಷದ ಜುಲೈನಲ್ಲಿ 71,838 ಟನ್ಗೆ ತಗ್ಗಿದೆ.

ಭಾರತವು ಪ್ರಮುಖವಾಗಿ ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.