ನವದೆಹಲಿ: ‘ಡಿಸೆಂಬರ್ ವೇಳೆಗೆ ದೇಶದಲ್ಲಿ ಸರಕು ಸಾಗಣೆ ವೆಚ್ಚವು ಒಂದಕಿಗೆ ಇಳಿಕೆಯಾಗಲಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಐಐಟಿ ಚೆನ್ನೈ, ಐಐಟಿ ಕಾನ್ಪುರ ಮತ್ತು ಐಐಎಂ ಬೆಂಗಳೂರು ಸಿದ್ಧಪಡಿಸಿದ ವರದಿ ಪ್ರಕಾರ, ದೇಶದಲ್ಲಿ ತ್ವರಿತಗತಿಯಲ್ಲಿ ಎಕ್ಸ್ಪ್ರೆಸ್ ವೇ ಮತ್ತು ಆರ್ಥಿಕ ವಲಯಗಳ (ಎಕನಾಮಿಕ್ ಕಾರಿಡಾರ್) ನಿರ್ಮಾಣ ಆಗುತ್ತಿದೆ. ಇದು ಸರಕು ಸಾಗಣೆ ವೆಚ್ಚವು ಶೇ 10ಕ್ಕೆ ಇಳಿಕೆಯಾಗಲು ನೆರವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸಾಗಣೆ ವೆಚ್ಚವು ಶೇ 16ರಷ್ಟಿತ್ತು ಎಂದು ವರದಿ ತಿಳಿಸಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಡ್ಕರಿ ಹೇಳಿದ್ದಾರೆ.

ಡಿಸೆಂಬರ್ ವೇಳೆಗೆ ದೇಶದ ಸರಕು ಸಾಗಣೆ ವೆಚ್ಚವು ಶೇ 9ಕ್ಕೆ ಇಳಿಯಲಿದೆ. ಇದು ದೇಶದ ಸ್ಪರ್ಧಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಾಯವಾಗಲಿದೆ. ಉದ್ಯಮ ವಲಯಕ್ಕೆ ಇದರ ಪೂರ್ಣ ಪ್ರಯೋಜನ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಅಮೆರಿಕದಲ್ಲಿ ಸರಕು ಸಾಗಣೆ ವೆಚ್ಚವು ಶೇ 12ರಷ್ಟಿದೆ. ಯುರೋಪಿಯನ್ ದೇಶಗಳಲ್ಲಿ ಶೇ 12 ಮತ್ತು ಚೀನಾದಲ್ಲಿ ಶೇ 8ರಿಂದ ಶೇ 10ರಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.