ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್‌ನಲ್ಲಿ ಸ್ಮಾರ್ಟ್‌ಫೋನ್‌ ಮಾರಾಟ ಶೇಕಡ 42ರಷ್ಟು ಹೆಚ್ಚಳ

Last Updated 17 ಡಿಸೆಂಬರ್ 2020, 15:42 IST
ಅಕ್ಷರ ಗಾತ್ರ

ನವದೆಹಲಿ: ಅಕ್ಟೋಬರ್ ತಿಂಗಳಿನಲ್ಲಿ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯು ಶೇಕಡ 42ರಷ್ಟು ಬೆಳವಣಿಗೆ ದಾಖಲಿಸಿದೆ. ಅಕ್ಟೋಬರ್‌ನಲ್ಲಿ ಒಟ್ಟು 2.1 ಕೋಟಿ ಸ್ಮಾರ್ಟ್‌ಫೋನ್‌ಗಳ ಮಾರಾಟ ಆಗಿದೆ. ಇದು ತಿಂಗಳೊಂದರಲ್ಲಿ ಆಗಿರುವ ಎರಡನೆಯ ಅತಿಹೆಚ್ಚಿನ ಮಾರಾಟ ಪ್ರಮಾಣ ಎಂದು ಐಡಿಸಿ ಹೇಳಿದೆ.

ಆನ್‌ಲೈನ್‌ ಮೂಲಕ ನಡೆದ ಹಲವು ಮಾರಾಟ ಮೇಳಗಳು ಹಾಗೂ ಲಾಕ್‌ಡೌನ್‌ ಅವಧಿಯಲ್ಲಿ ತಾವು ಬಯಸಿದ್ದನ್ನು ಖರೀದಿಸಲು ಆಗದಿದ್ದವರು ಮೂರನೆಯ ತ್ರೈಮಾಸಿಕದಲ್ಲಿ ಖರೀದಿಗೆ ಮುಂದಾದ ಕಾರಣ ಅಕ್ಟೋಬರ್‌ ತಿಂಗಳಿನಲ್ಲಿ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ಐಡಿಸಿ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಸೆಪ್ಟೆಂಬರ್‌ ತಿಂಗಳಿನಲ್ಲಿ ಒಟ್ಟು 2.3 ಕೋಟಿ ಸ್ಮಾರ್ಟ್‌ಫೋನ್‌ಗಳ ಮಾರಾಟ ಆಗಿತ್ತು. ಆ ತಿಂಗಳ ಮಾರಾಟವನ್ನು ಹೊರತುಪಡಿಸಿದರೆ, ಅಕ್ಟೋಬರ್‌ನಲ್ಲಿ ಆಗಿರುವ ಮಾರಾಟ ಎರಡನೆಯ ಅತಿಹೆಚ್ಚಿನ ಪ್ರಮಾಣದ್ದು’ ಎಂದು ಅದು ಹೇಳಿದೆ.

ಒಟ್ಟು ಮಾರಾಟದಲ್ಲಿ ಆನ್‌ಲೈನ್‌ ಮಾರುಕಟ್ಟೆಗಳ ಪಾಲು ಶೇಕಡ 51ರಷ್ಟಿದೆ. ಆನ್‌ಲೈನ್‌ ಮಾರುಕಟ್ಟೆಗಳು ಸ್ಮಾರ್ಟ್‌ಫೋನ್‌ ಮಾರಾಟದ ವಿಚಾರದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 53ರಷ್ಟು ಬೆಳವಣಿಗೆ ದಾಖಲಿಸಿವೆ.

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯು ಇಂದಿಗೂ 50ರಿಂದ 70 ನಗರಗಳಲ್ಲಿ ಕೇಂದ್ರೀಕೃತ ಆಗಿದೆ. ಸ್ಮಾರ್ಟ್‌ಫೋನ್‌ ಉದ್ಯಮವು ಕೆಳಹಂತದ ನಗರಗಳ ಮೇಲೆ ಹೆಚ್ಚಿನ ಗಮನ ನೀಡಬೇಕು. ಕೈಗೆಟಕುವ ದರದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡಬೇಕು ಎಂದು ಐಡಿಸಿ ಸಂಸ್ಥೆಯ ಸಹ ಸಂಶೋಧನಾ ವ್ಯವಸ್ಥಾಪಕಿ ಉಪಾಸನಾ ಜೋಷಿ ಹೇಳಿದ್ದಾರೆ.

ಕಂಪನಿ; ಮಾರುಕಟ್ಟೆ ಪಾಲು

ಶವೋಮಿ;24.8%

ಸ್ಯಾಮ್‌ಸಂಗ್‌;20.6%

ವಿವೊ;17.8%

ರಿಯಲ್‌ಮಿ;13.8%

ಒಪ್ಪೊ;12.3%

ಇತರ;10.7%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT