ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಸಿ ಅನುಮತಿ ಪಡೆಯದೆ ದೆಹಲಿಯಿಂದ ಅಜರ್‌ಬೈಜಾನ್‌ನ ಬಾಕುಗೆ ಹಾರಿದ ಇಂಡಿಗೊ ವಿಮಾನ!

ಡಿಜಿಸಿಎ ತನಿಖೆಗೆ ಆದೇಶಿಸಿದೆ
Published 30 ಜನವರಿ 2024, 16:03 IST
Last Updated 30 ಜನವರಿ 2024, 16:03 IST
ಅಕ್ಷರ ಗಾತ್ರ

ನವದೆಹಲಿ: ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಣ (ಎಟಿಸಿ) ಘಟಕದ ಅನುಮತಿ ಪಡೆಯದೆ ಇಂಡಿಗೊ ವಿಮಾನವೊಂದು ನವದೆಹಲಿಯಿಂದ ಅಜರ್‌ಬೈಜಾನ್‌ ದೇಶದ ರಾಜಧಾನಿ ಬಾಕುಗೆ ಹಾರಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. 

ಜನವರಿ 28ರಂದು ಈ ಘಟನೆ ನಡೆದಿದ್ದು, ಸುರಕ್ಷತಾ ಮಾನದಂಡ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ತನಿಖೆಗೆ ಆದೇಶಿಸಿದೆ. ಅಲ್ಲದೇ, ವಿಚಾರಣೆ ಕಾಯ್ದಿರಿಸಿದ ಇಬ್ಬರು ಪೈಲಟ್‌ಗಳನ್ನು ಕೆಲಸದ ಪಾಳಿಯಿಂದ ಕೈಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾರಾಟಕ್ಕೂ ಮೊದಲು ಸರದಿ ಸಾಲಿನಲ್ಲಿ ವಿಮಾನವನ್ನು ನಿಲುಗಡೆ ಮಾಡಿ ಅನುಮತಿ ನೀಡುವವರೆಗೂ ಕಾಯುವಂತೆ ಎಟಿಸಿ ಸೂಚಿಸಿತ್ತು. ಆದರೆ, ಪೈಲಟ್‌ ಈ ಸೂಚನೆ ಪಾಲಿಸಿಲ್ಲ ಎಂದು ತಿಳಿಸಿದ್ದಾರೆ.

‘ಕಂಪನಿಗೆ ಸೇರಿದ ವಿಮಾನವು (6ಇ 1803) ನಿಯಮ ಉಲ್ಲಂಘಿಸಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಪೈಲಟ್‌ಗಳು ತಪ್ಪು ಎಸಗಿರುವುದು ಸಾಬೀತಾದರೆ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು’ ಎಂದು ಇಂಡಿಗೊ ವಕ್ತಾರರು ಗುರುವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT