ನವದೆಹಲಿ: ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಅಕ್ಟೋಬರ್‌ನಲ್ಲಿ ₹19,957 ಕೋಟಿ ಹೂಡಿಕೆ ಆಗಿದೆ. ಸೆಪ್ಟೆಂಬರ್‌ನಲ್ಲಿ ಆಗಿದ್ದ ಹೂಡಿಕೆಗೆ ಹೋಲಿಸಿದರೆ ಶೇ 42ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಗುರುವಾರ ಹೇಳಿದೆ.

ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಸೆಪ್ಟೆಂಬರ್‌ನಲ್ಲಿ ₹14,091 ಕೋಟಿ ಬಂಡವಾಳ ಹೂಡಿಕೆ ಆಗಿತ್ತು ಎಂದು ಅದು ತಿಳಿಸಿದೆ. ಹೂಡಿಕೆದಾರರು ಸ್ಮಾಲ್‌ಕ್ಯಾಪ್ ಫಂಡ್‌ಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಅಕ್ಟೋಬರ್‌ನಲ್ಲಿ ಹೂಡಿಕೆ ಹೆಚ್ಚಾಗಲು ಕಾರಣ ಎಂದು ಹೇಳಿದೆ. ಸ್ಮಾಲ್‌ಕ್ಯಾಪ್‌ಗಳಲ್ಲಿ ₹4,495 ಕೋಟಿ ಬಂಡವಾಳ ಹೂಡಿಕೆ ಆಗಿದೆ.

ಅಕ್ಟೋಬರ್ ತಿಂಗಳನ್ನೂ ಒಳಗೊಂಡರೆ ಸತತ 32ನೇ ತಿಂಗಳಿನಿಂದಲೂ ಬಂಡವಾಳ ಒಳಹರಿವು ಆಗುತ್ತಿದೆ. ಈಕ್ವಿಟಿ ಎಎಫ್‌ನ ಎಲ್ಲಾ ವಿಭಾಗಗಳಲ್ಲಿಯೂ ಹೂಡಿಕೆ ಆಗುತ್ತಿದೆ.

ಡೆಟ್ ಫಂಡ್‌ಗಳಲ್ಲಿಯೂ ಅಕ್ಟೋಬರ್‌ನಲ್ಲಿ ₹42,634 ಕೋಟಿ ಹೂಡಿಕೆ ಆಗಿದೆ. ಆಗಸ್ಟ್‌ನಲ್ಲಿ ₹25,873 ಕೋಟಿ ಮತ್ತು ಸೆಪ್ಟೆಂಬರ್‌ನಲ್ಲಿ ₹1.01 ಲಕ್ಷ ಕೋಟಿಯಷ್ಟು ಬಂಡವಾಳವನ್ನು ಹೂಡಿಕೆದಾರರು ಹಿಂದಕ್ಕೆ ಪಡೆದಿದ್ದರು.

ಮ್ಯೂಚುವಲ್ ಫಂಡ್ ಉದ್ಯಮದಲ್ಲಿ 44 ಕಂಪನಿಗಳಿದ್ದು, ಅಕ್ಟೋಬರ್‌ನಲ್ಲಿ ಒಟ್ಟು ₹80,528 ಕೋಟಿ ಹೂಡಿಕೆ ಆಗಿದೆ. ಸೆಪ್ಟೆಂಬರ್‌ನಲ್ಲಿ ₹66,192 ಕೋಟಿ ಬಂಡವಾಳ ಹೊರಹರಿವು ಆಗಿತ್ತು ಎಂದು ಒಕ್ಕೂಟವು ಮಾಹಿತಿ ನೀಡಿದೆ.

ಮ್ಯೂಚುವಲ್ ಫಂಡ್ ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯ

ಅಕ್ಟೋಬರ್ ಅಂತ್ಯಕ್ಕೆ- ₹46.71 ಲಕ್ಷ ಕೋಟಿ

ಸೆಪ್ಟೆಂಬರ್ ಅಂತ್ಯಕ್ಕೆ- ₹46.58 ಲಕ್ಷ ಕೋಟಿ

ಹೂಡಿಕೆ ವಿವರ (ಕೋಟಿಗಳಲ್ಲಿ)

ಆಗಸ್ಟ್;₹20245

ಸೆಪ್ಟೆಂಬರ್;₹14091

ಅಕ್ಟೋಬರ್;₹19957

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.