ಉಳಿತಾಯ ಮತ್ತು ಹೂಡಿಕೆ ಈ ಎರಡೂ ಪದಗಳನ್ನು ಅನೇಕ ಸಂದರ್ಭಗಳಲ್ಲಿ ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ. ಹೂಡಿಕೆಯನ್ನು ಸಾಮಾನ್ಯವಾಗಿ ಉಳಿತಾಯ ಎಂದೂ ಕರೆಯಲಾಗುತ್ತದೆ. ಆದರೆ ಈ ಎರಡು ಪದಗಳ ನಡುವೆ ಮೂಲಭೂತ ವ್ಯತ್ಯಾಸ ಇದೆ. ಇವೆರಡೂ ಹೇಗೆ ಭಿನ್ನವಾಗಿವೆ ಎನ್ನುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ಉಳಿತಾಯ: ಮಾಸಿಕವಾಗಿ ಪಾವತಿಸಬೇಕಾದ ಬಿಲ್ಗಳು ಸೇರಿದಂತೆ ನಿಮ್ಮ ಎಲ್ಲಾ ಖರ್ಚುಗಳನ್ನು ಪೂರೈಸಿದ ನಂತರ ಉಳಿಯುವ ಹಣವೇ ನಿಮ್ಮ ಉಳಿತಾಯ. ಹಣ ಉಳಿಸುವ ಕಲ್ಪನೆಯು ಖರ್ಚುಗಳನ್ನು ಭರಿಸಿದ ನಂತರ ಒಂದು ನಿರ್ದಿಷ್ಟ ಪ್ರಮಾಣದ ಮೊತ್ತವನ್ನು ಪ್ರತ್ಯೇಕವಾಗಿ ತೆಗೆದು ಇರಿಸುವ ಪ್ರವೃತ್ತಿಯನ್ನು ಸೂಚಿಸುತ್ತದೆ. ಅಗತ್ಯ ಅಥವಾ ತುರ್ತು ಸಮಯದಲ್ಲಿ ಇದನ್ನು ಬಳಸಲು ಉದ್ದೇಶಿಸಲಾಗಿರುತ್ತದೆ.

ಹೂಡಿಕೆ: ಹೂಡಿಕೆ ಎನ್ನುವುದು ನಿಮ್ಮ ಹಣವನ್ನು ವಿವಿಧ ಹಣಕಾಸು ಉತ್ಪನ್ನಗಳಲ್ಲಿ, ಹೂಡಿಕೆಯ ಸಾಧನಗಳಲ್ಲಿ ಮತ್ತು ವಿಮೆ ಉತ್ಪನ್ನಗಳಲ್ಲಿ ತೊಡಗಿಸುವ ಕ್ರಿಯೆಯಾಗಿರುತ್ತದೆ. ಹೂಡಿಕೆಯ ಮುಖ್ಯ ಗುರಿ ನಿಮ್ಮ ಹಣವನ್ನು ಬೆಳೆಯುವಂತೆ ಮಾಡುವುದು ಮತ್ತು ಸಂಪತ್ತನ್ನು ಸೃಷ್ಟಿಸಲು ನಿಮಗೆ ಸಹಾಯ ಮಾಡುವುದು. ಹೂಡಿಕೆಯು ಲಾಭ ಗಳಿಸಲೂ ಸಹಾಯ ಮಾಡುತ್ತದೆ. ನಿಮ್ಮ ಹೂಡಿಕೆ ಹಣ ಹೆಚ್ಚಳಗೊಳ್ಳುವುದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಮತ್ತು ನಿಮ್ಮ ಸಂಪತ್ತು ಸೃಷ್ಟಿಯಾಗುವುದನ್ನು ಮೇಲಿಂದ ಮೇಲೆ ಪರಿಶೀಲಿಸುವುದು ಹೂಡಿಕೆಗೆ ಅಗತ್ಯವಾಗಿರುತ್ತದೆ.

ಪ್ರಮುಖ ವ್ಯತ್ಯಾಸಗಳು

ಉದ್ದೇಶ

ಉಳಿತಾಯ ಮತ್ತು ಹೂಡಿಕೆಯ ನಡುವಣ ಅನೇಕ ವ್ಯತ್ಯಾಸಗಳಲ್ಲಿ ಉದ್ದೇಶ ಮುಖ್ಯವಾಗಿದೆ. ಉಳಿತಾಯ ಮಾಡುವುದರಿಂದ ಅದು ಅಗತ್ಯವಿದ್ದಾಗ ಪ್ರಯೋಜನಕ್ಕೆ ಬರಬಹುದು. ಉಳಿಸಿದ ಹಣವು ಭವಿಷ್ಯದ ಬಳಕೆಗಾಗಿ ಮೀಸಲಿಟ್ಟ ಆದಾಯವಾಗಿದೆ. ಈ ಹಣವನ್ನು ಅಗತ್ಯವಿದ್ದಲ್ಲಿ ಯಾವುದೇ ಪರಿಸ್ಥಿತಿಯಲ್ಲಿಯೂ ಬಳಸಬಹುದು.

ಹಣವನ್ನು ಉಳಿಸುವುದು ಸುಲಭ. ನಿಮ್ಮ ಆದಾಯದಿಂದ ಒಂದು ತಿಂಗಳವರೆಗೆ ನಿಮ್ಮ ಎಲ್ಲಾ ಬಿಲ್ಗಳನ್ನು ಪಾವತಿಸಿದ ನಂತರ ನಿಮ್ಮ ಬಳಿ ಉಳಿಯುವ ಹಣವು ಉಳಿತಾಯವಾಗಿ ಪರಿಣಮಿಸುತ್ತದೆ. ಇದನ್ನು ನಗದು ರೂಪದಲ್ಲಿ ಠೇವಣಿ ಇಡಬಹುದು ಅಥವಾ ಉಳಿತಾಯ ಖಾತೆಯಲ್ಲಿ ಅಥವಾ ಪಿಂಚಣಿ ನಿಧಿಯಲ್ಲಿ ಠೇವಣಿ ಇಡಬಹುದು. ಉಳಿತಾಯವು ಆರ್ಥಿಕ ಶಿಸ್ತಿಗೆ ಅಡಿಪಾಯ ಹಾಕಿದರೆ, ಅದು ಸಂಪತ್ತನ್ನು ಸೃಷ್ಟಿಸಲು ಸಹಾಯ ಮಾಡುವುದಿಲ್ಲ. ಉಳಿತಾಯವು ನಿಶ್ಚಲವಾದ ನೀರಿನಂತೆ ತಟಸ್ಥವಾಗಿರುತ್ತದೆ, ಚಲನಶೀಲವಲ್ಲ. ಹಣದುಬ್ಬರ ಹೆಚ್ಚಾದಂತೆ ಅದರ ಮೌಲ್ಯ ಕ್ಷೀಣಿಸುತ್ತದೆ.

ಹೂಡಿಕೆ

ಜನರು ಹೆಚ್ಚಾಗಿ ಹೂಡಿಕೆ ಮಾಡುವ ಬಗ್ಗೆ ಪ್ರಯೋಜನಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಕೆಲವರಲ್ಲಿ ಹೆಚ್ಚುವರಿಯಾಗಿ ಉಳಿಸಲು ಹಣವೂ ಇರುವುದಿಲ್ಲ. ಹೀಗಾಗಿ ಅವರು ಹೂಡಿಕೆ ಬಗ್ಗೆ ಆಲೋಚಿಸುವುದಿಲ್ಲ. ಹೂಡಿಕೆಯು ಉಳಿತಾಯದಿಂದ ಒಂದು ಹೆಜ್ಜೆ ಮುಂದೆ ಇರುತ್ತದೆ. ನೀವು ಹಣವನ್ನು ಉಳಿಸಿದ್ದರೆ ಅದರಿಂದ ಹೆಚ್ಚಿನ ಆದಾಯವನ್ನು ಪಡೆಯಲು ನೀವು ಅದನ್ನು ವಿವಿಧ ಹೂಡಿಕೆ ಮಾರ್ಗಗಳಲ್ಲಿ ತೊಡಗಿಸಬಹುದು.

ಹೆಚ್ಚುತ್ತಿರುವ ಹಣದುಬ್ಬರ ವಿರುದ್ಧ ಹೋರಾಡಲು ಹೂಡಿಕೆ ನೆರವಿಗೆ ಬರುತ್ತದೆ. ಇದು ನಿಮಗೆ ಸಂಪತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಹೂಡಿಕೆ ಎಂದು ವರ್ಗೀಕರಿಸಬಹುದಾದ ವಿಭಿನ್ನ ಹಣಕಾಸು ಉತ್ಪನ್ನಗಳಿವೆ. ಉದಾಹರಣೆಗೆ ರಿಯಲ್ ಎಸ್ಟೇಟ್, ಮ್ಯೂಚುವಲ್ ಫಂಡ್ಗಳು, ಬಾಂಡ್ಗಳು, ಷೇರುಗಳು ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ಇತರ ಉತ್ಪನ್ನಡ್ಗಳು. ನಿಮ್ಮ ಹಣವನ್ನು ನೀವು ಹೂಡಿಕೆ ಮಾಡುವ ಮೊದಲು ನಿಮ್ಮ ಹೂಡಿಕೆಯ ಆಯ್ಕೆಯು ನಿಮ್ಮ ಹಣಕಾಸಿನ ಗುರಿಗಳಿಗೆ ಹೊಂದಿಕೆಯಾಗುವುದೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

ನಷ್ಟ ಸಾಧ್ಯತೆ

ಹೂಡಿಕೆದಾರರ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶವೆಂದರೆ ನಷ್ಟ ಸಾಧ್ಯತೆ ( ರಿಸ್ಕ್). ಜನರು ಸಾಮಾನ್ಯವಾಗಿ ಹಣ ಹೂಡಿಕೆ ಮಾಡುವುದನ್ನು ತಡೆಯಲು ಮತ್ತು ಅದನ್ನು ಉಳಿತಾಯ ಖಾತೆಯಲ್ಲಿ ಸುರಕ್ಷಿತವಾಗಿ ಇರಿಸಲು ರಿಸ್ಕ್ ಮುಖ್ಯ ಕಾರಣವಾಗಿದೆ. ಉಳಿತಾಯ ಠೇವಣಿಯು ಎಲ್ಲಾ ಹಣಕಾಸು ಸಾಧನಗಳಲ್ಲಿ ಕನಿಷ್ಠ ಅಪಾಯವನ್ನು ಹೊಂದಿದೆ ಎಂಬುದು ನಿಜ. ಅದು ನಿಜವಾಗಿದ್ದರೂ ಅದರಿಂದ ನಿಮಗೆ ಹೆಚ್ಚಿನ ಲಾಭ ದೊರೆಯುವುದಿಲ್ಲ.

ಹೂಡಿಕೆ ನಿಮಗೆ ಸ್ವಲ್ಪ ಪ್ರಮಾಣದ ಅಪಾಯ ಮತ್ತು ಚಂಚಲತೆಯೊಂದಿಗೆ ಉತ್ತಮ ಲಾಭವನ್ನು ಗಳಿಸಲು ಅನುವು ಮಾಡಿಕೊಡುತ್ತದೆ. ಹೂಡಿಕೆ ಮಾಡುವುದು ಕೆಲಮಟ್ಟಿಗೆ ಅಪಾಯಕಾರಿ ಎಂದರೂ ಅಷ್ಟೇ ಲಾಭದಾಯಕವೂ ಆಗಿರುತ್ತದೆ. ನಿಮ್ಮ ಹಣದ ನಿರ್ವಹಣೆ ವಿಷಯದಲ್ಲಿ ಅಪಾಯ ತಗ್ಗಿಸಲು ಅಥವಾ ಸಮರ್ಥವಾಗಿ ನಿರ್ವಹಿಸಲು ನೀವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬಹುದು. ಸ್ಮಾರ್ಟ್ ಹೂಡಿಕೆದಾರರಾಗಲು ಪರಿಶ್ರಮ ಪಡಬೇಕಾಗುತ್ತದೆ.

ರಿಟರ್ನ್ಸ್

ಉಳಿತಾಯವು ಮೂಲ ಮೊತ್ತದಲ್ಲಿ ಸಾಕಷ್ಟು ಲಾಭವನ್ನು ಸೇರಿಸುವುದಿಲ್ಲ. ಬಂಡವಾಳದ ಸಂರಕ್ಷಣೆಯೇ ಉಳಿತಾಯದ ಹಿಂದಿನ ಉದ್ದೇಶವಾಗಿದೆ. ಇಲ್ಲಿ ಯಾವುದೇ ನಷ್ಟದ ಸಾಧ್ಯತೆ ಇರುವುದಿಲ್ಲ. ಮತ್ತು ಹೆಚ್ಚು ಆದಾಯವನ್ನು ನಿರೀಕ್ಷಿಸುವಂತಿಲ್ಲ.

ಹೂಡಿಕೆ ವಿಷಯದಲ್ಲಿ ನೆನಪಿನಲ್ಲಿ ಇಡುವ ಮುಖ್ಯ ಸಂಗತಿ ಏನೆಂದರೆ –ಹೆಚ್ಚಿನ ರಿಸ್ಕ್ ಗೆ ಉತ್ತಮ ಆದಾಯ ಇರುವುದು. ಹೂಡಿಕೆಯ ದೊಡ್ಡ ಲಾಭವೆಂದರೆ ಅದು ನೀಡುವ ಹೆಚ್ಚಿನ ಆದಾಯ. ನೀವು ಹೂಡಿಕೆದಾರರಾಗಿ ರಿಸ್ಕ್-ವಿರೋಧಿಗಳಾಗಿದ್ದರೆ ಅಥವಾ ಕಡಿಮೆ ರಿಸ್ಕ್ ಹೊಂದಿದ್ದರೆ ನೀವು ಸಾಲದ ನಿಧಿಗಳಂತೆ ಕಡಿಮೆ ರಿಸ್ಕ್ ಇಲ್ಲದ ಉಳಿತಾಯ ಆಯ್ಕೆ ಮಾಡಬಹುದು

ಲಿಕ್ವಿಡಿಟಿ

ಉಳಿತಾಯ: ಹಣದ ದ್ರವ್ಯತೆಯು (liquidity) ನಿಮ್ಮ ಹಣ ಉಳಿಸಲು ಅಥವಾ ವಿವಿಧ ಮಾರ್ಗಗಳಲ್ಲಿ ಹೂಡಿಕೆ ಮಾಡಲು ಅಥವಾ ನೀವು ಖರೀದಿಸಿದ ಷೇರುಗಳ ಕೈ ಬದಲಾಯಿಸಲು ಸುಲಭವಾಗುವುದನ್ನು ಸೂಚಿಸುತ್ತದೆ. ಉಳಿತಾಯವು ಹೆಚ್ಚು ಲಿಕ್ವಿಡ್ ರೂಪದಲ್ಲಿರುತ್ತದೆ ಏಕೆಂದರೆ ಅದು ಕೇವಲ ಹಣವಲ್ಲ. ಅದು ಉಳಿತಾಯ ಖಾತೆ ಅಥವಾ ಠೇವಣಿ ಪ್ರಮಾಣಪತ್ರವಾಗಿರಲಿ, ಯಾವುದೇ ತೊಂದರೆಯಿಲ್ಲದೆ ಯಾವುದೇ ಸಮಯದಲ್ಲಿ ಉಳಿತಾಯವನ್ನು ನಗದನ್ನಾಗಿಸಬಹುದು.

ಹೂಡಿಕೆ: ಇತ್ತೀಚಿನವರೆಗೂ ಹೂಡಿಕೆಗಳಿಗೆ ಲಾಕ್-ಇನ್ ಅವಧಿ ಇರುತ್ತಿತ್ತು. ಅಂದರೆ ನಿರ್ದಿಷ್ಟ ಸಮಯದವರೆಗೆ ಹಣ ಹಿಂದೆ ಪಡೆಯದ ಷರತ್ತು ಇರುತ್ತಿತ್ತು. ಆದಾಗ್ಯೂ ಈ ದಿನಗಳಲ್ಲಿ ಲಿಕ್ವಿಡಿಟಿ ಅಂಶದ ಮಿತಿ ಹೆಚ್ಚಿಸಲಾಗಿದೆ. ನೀವು ಕ್ರಮವಾಗಿ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ಐಪಿ) ವಿಧಾನ ಅಥವಾ ಎಸ್ಡಬ್ಲ್ಯುಪಿ ಮತ್ತು ಎಸ್ಟಿಪಿ ಮೂಲಕ ವ್ಯವಸ್ಥಿತವಾಗಿ ಹಿಂತೆಗೆದುಕೊಳ್ಳುವ ಯೋಜನೆ ಮತ್ತು ವ್ಯವಸ್ಥಿತ ವರ್ಗಾವಣೆ ಯೋಜನೆಯ ಮೂಲಕ ಹೂಡಿಕೆ ಮಾಡಲು ಆಯ್ಕೆ ಮಾಡಬಹುದು.

ಮಾರುಕಟ್ಟೆಯಲ್ಲಿ ಸಾಕಷ್ಟು ಲಿಕ್ವಿಡಿಟಿ ಮ್ಯೂಚುವಲ್ ಫಂಡ್ಗಳಿವೆ. ಇವು ಹೂಡಿಕೆದಾರರಿಗೆ ಹೆಚ್ಚು ಪ್ರಯೋಜನಕಾರಿಯಾಗಿವೆ.

ಯಾವ ಮಾರ್ಗದಲ್ಲಿ ಹೋಗಬೇಕು?

ಉಳಿತಾಯ ಮತ್ತು ಹೂಡಿಕೆ ಎರಡು ವಿಭಿನ್ನ ಪರಿಕಲ್ಪನೆಗಳಾಗಿವೆ. ಸಂಪತ್ತನ್ನು ಸೃಷ್ಟಿಸಲು ಎರಡೂ ಕೆಲಸ ಮಾಡಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಇವೆರಡರಲ್ಲಿ ಒಂದು ಪ್ರತ್ಯೇಕವಾಗಿ ನಿಲ್ಲಲು ಸಾಧ್ಯವಿಲ್ಲ. ಹೂಡಿಕೆ ಮಾಡುವುದು ಸಂಪತ್ತನ್ನು ಸೃಷ್ಟಿಸುವ ಅವಶ್ಯಕತೆಯಾಗಿದೆ.

ಹೂಡಿಕೆಯು ನಿಮ್ಮ ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ಹಣಕಾಸಿನ ಆಯ್ಕೆಗಳು ನಿಮ್ಮ ಹೂಡಿಕೆಯ ಆಯ್ಕೆಗಳೊಂದಿಗೆ ಸೇರಿಕೊಂಡರೆ ಸುರಕ್ಷಿತ ಭವಿಷ್ಯ ನಿಮ್ಮದಾಗುತ್ತದೆ.

(ಲೇಖಕ: ಗ್ರೋವ್ ಸಂಸ್ಥೆಯ ಸಿಒಒ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.