ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ ಎಸ್ಟೇಟ್‌ ಹೂಡಿಕೆಬೆಂಗಳೂರು ನಗರ ಹೆಗ್ಗಳಿಕೆ

Last Updated 4 ಜೂನ್ 2020, 16:12 IST
ಅಕ್ಷರ ಗಾತ್ರ

ಬೆಂಗಳೂರು: ಮಾರ್ಚ್‌ಗೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ವಲಯವು ಗರಿಷ್ಠ ಮಟ್ಟದ ಸಾಂಸ್ಥಿಕ ಹೂಡಿಕೆ ಕಂಡಿದೆ.

ದೇಶದಾದ್ಯಂತ 2019–20ರಲ್ಲಿ ವಸತಿ, ವಾಣಿಜ್ಯ ಮತ್ತು ಕಚೇರಿ ಯೋಜನೆಗಳಲ್ಲಿ ಹೂಡಿಕೆಯಾದ ಒಟ್ಟಾರೆ ₹ 33,200 ಕೋಟಿಗಳಲ್ಲಿ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ವಲಯವು (ಶೇ 37ರಷ್ಟು) ₹ 12 ಸಾವಿರ ಕೋಟಿ ಮೊತ್ತದ ಬಂಡವಾಳ ಆಕರ್ಷಿಸಿದೆ.

ಹಿಂದಿನ ವರ್ಷದ ಹೂಡಿಕೆಗೆ (₹ 7,400 ಕೋಟಿ) ಹೋಲಿಸಿದರೆ 2019–20ರಲ್ಲಿನ ಹೂಡಿಕೆಯು ಶೇ 68ರಷ್ಟು ಹೆಚ್ಚಳ ಸಾಧಿಸಿದೆ.

‘ಕಳೆದ ಐದು ವರ್ಷಗಳಲ್ಲಿನ ಹೂಡಿಕೆಗೆ ಹೋಲಿಸಿದರೆ ದೇಶದಾದ್ಯಂತ ಹಿಂದಿನ ವರ್ಷದ ಹೂಡಿಕೆ ಪ್ರಮಾಣ ಕಡಿಮೆ ಇದೆ. ಒಟ್ಟಾರೆ ಆರ್ಥಿಕ ಪರಿಸ್ಥಿತಿ ಕಠಿಣವಾಗಿರುವುದು ಮತ್ತು ವರ್ಷಾಂತ್ಯದ ವೇಳೆಗೆ ಎದುರಾದ ಕೋವಿಡ್‌ ಬಿಕ್ಕಟ್ಟು ಬಂಡವಾಳ ಹೂಡಿಕೆ ಪ್ರಮಾಣ ತಗ್ಗಿಸಿದೆ’ ಎಂದು ಎಪಿಎಸಿ ವೆಸ್ಟಿಯನ್‌ ಗ್ಲೋಬಲ್‌ನ ಸಿಇಒ ಶ್ರೀನಿವಾಸ್‌ ರಾವ್‌ ಹೇಳಿದ್ದಾರೆ.

ಹೂಡಿಕೆ ಮೊತ್ತದಲ್ಲಿ ಕೋಟಕ್‌ ರಿಯಾಲ್ಟಿ (₹ 3,000 ಕೋಟಿ) ಮುಂಚೂಣೀಯಲ್ಲಿ ಇದೆ. ನಂತರದ ಸ್ಥಾನದಲ್ಲಿ ಗೋದ್ರೆಜ್‌ ಫಂಡ್‌ (₹ 790 ಕೋಟಿ) ಇದೆ. ಜಿಐಸಿ, ಎಚ್ಐಎನ್‌ಇಎಸ್‌ ಮತ್ತು ಡಿಎಂಐ ಅಲ್ಟರ್‌ನೇಟಿವ್ಸ್‌ ಪ್ರಮುಖ ಹೂಡಿಕೆ ಕಂಪನಿಗಳಾಗಿವೆ ಎಂದು ವೆಸ್ಟಿಯನ್ ಗ್ಲೋಬಲ್‌ ವರ್ಕ್‌ಸ್ಪೇಸ್‌ ಸರ್ವಿಸಸ್‌ ಪ್ರೈವೇಟ್ ಲಿಮಿಟೆಡ್‌ ತಿಳಿಸಿದೆ.

ದೇಶದಾದ್ಯಂತ ಹೂಡಿಕೆಯಾದ ಬಂಡವಾಳದಲ್ಲಿ ಬೆಂಗಳೂರು, ಮುಂಬೈ ಮತ್ತು ಪುಣೆ ಮಹಾನಗರಗಳು ಶೇ 90ರಷ್ಟು ಪಾಲನ್ನು ಬಾಚಿಕೊಂಡಿವೆ. ಮುಂಬೈ ನಗರವು ಶೇ 42ರಷ್ಟು ಹೂಡಿಕೆ ಆಕರ್ಷಿಸಿದೆ.

₹ 33,200 ಕೋಟಿ: ದೇಶದಲ್ಲಿನ ಒಟ್ಟಾರೆ ಹೂಡಿಕೆ

₹ 12,000: ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ

68 %: ಬೆಂಗಳೂರಿನಲ್ಲಿನ ಹೂಡಿಕೆ ಹೆಚ್ಚಳ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT