ಭಾನುವಾರ, ಏಪ್ರಿಲ್ 18, 2021
25 °C

₹ 9.41 ಲಕ್ಷ ಕೋಟಿಯಷ್ಟು ಹೆಚ್ಚಿದ ಹೂಡಿಕೆದಾರರ ಸಂಪತ್ತು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಷೇರು ಪೇಟೆಗಳಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಉತ್ಸಾಹದ ವಹಿವಾಟಿನ ಪರಿಣಾಮವಾಗಿ ಹೂಡಿಕೆದಾರರ ಸಂಪತ್ತು ₹ 9.41 ಲಕ್ಷ ಕೋಟಿಗಳಷ್ಟು ಹೆಚ್ಚಳ ಆಗಿದೆ. ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 1,147 ಅಂಶ ಏರಿಕೆ ಕಂಡಿದೆ. ನಿಫ್ಟಿ 326 ಅಂಶ ಏರಿಕೆ ದಾಖಲಿಸಿದೆ.

‘ಬಾಂಡ್‌ ಗಳಿಕೆಯಲ್ಲಿನ ತೀವ್ರ ಹೆಚ್ಚಳಕ್ಕೆ ಸಂಬಂಧಿಸಿದ ಆತಂಕಗಳು ಕರಗುತ್ತಿವೆ. ಹಾಗೆಯೇ, ಆರ್ಥಿಕತೆಯ ಆರೋಗ್ಯವನ್ನು ಹೇಳುವ ಪ್ರಮುಖ ಸೂಚಕಗಳು ಒಳ್ಳೆಯ ಸುದ್ದಿ ಹೊತ್ತು ತಂದಿದ್ದು ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸಿದವು. ಜಾಗತಿಕ ಮಾರುಕಟ್ಟೆಗಳು ಕೂಡ ಒಳ್ಳೆಯ ವಹಿವಾಟು ನಡೆಸಿದವು’ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಕಾರ್ಯತಂತ್ರ ವಿಭಾಗದ ಮುಖ್ಯಸ್ಥ ಬಿನೋದ್ ಮೋದಿ ಹೇಳಿದರು.

ಜಿಗಿದ ರೂಪಾಯಿ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಬುಧವಾರ 65 ಪೈಸೆಗಳಷ್ಟು ಹೆಚ್ಚಳ ಆಯಿತು. 2020ರ ಸೆಪ್ಟೆಂಬರ್‌ ನಂತರ ಒಂದೇ ದಿನದಲ್ಲಿ ಆದ ಅತಿದೊಡ್ಡ ಚೇತರಿಕೆ ಇದು. ದಿನದ ವಹಿವಾಟಿನ ಅಂತ್ಯಕ್ಕೆ ರೂಪಾಯಿ ಮೌಲ್ಯವು 72.72 ಆಗಿತ್ತು.

ದೇಶಿ ಷೇರು ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕ ವಹಿವಾಟು, ವಿದೇಶಿ ಹೂಡಿಕೆಯ ಒಳಹರಿವು ಕೂಡ ರೂಪಾಯಿ ಮೌಲ್ಯ ಹೆಚ್ಚಿಸುವಲ್ಲಿ ನೆರವಾದವು.

‘ರೂಪಾಯಿ ಮೌಲ್ಯ ಹೆಚ್ಚಾಗಲು ಕಚ್ಚಾ ತೈಲ ಬೆಲೆ ತುಸು ಇಳಿಕೆಯಾಗಿದ್ದು ಕೂಡ ಒಂದು ಕಾರಣ’ ಎಂದು ಶೇರ್‌ಖಾನ್‌ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಸೈಫ್‌ ಮುಕದಮ್‌ ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು