ಶುಕ್ರವಾರ, ಜುಲೈ 1, 2022
28 °C

‘ಹೆಚ್ಚುತ್ತಿದೆ ಎಸ್‌ಐಪಿ ಜನಪ್ರಿಯತೆ’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ತೊಡಗಿಸುವ ಪ್ರಮಾಣವು ಒಂದು ವರ್ಷದಲ್ಲಿ ಶೇಕಡ 30ರಷ್ಟು ಜಾಸ್ತಿಯಾಗಿದೆ.

2020–21ರಲ್ಲಿ ಎಸ್‌ಐಪಿ ಮೂಲಕ ಒಟ್ಟು ₹ 96 ಸಾವಿರ ಕೋಟಿ ಹೂಡಿಕೆ ಆಗಿತ್ತು. 2021–22ರಲ್ಲಿ ಇದು ₹ 1.24 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್‌ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್ಐ) ತಿಳಿಸಿದೆ.

‘ದೇಶದ ಸಣ್ಣ ಹೂಡಿಕೆದಾರರು ಸಂಪತ್ತು ಸೃಷ್ಟಿಗೆ ಎಸ್‌ಐಪಿ ಬಳಕೆ ಮಾಡಿಕೊಳ್ಳುವುದು ಜನಪ್ರಿಯವಾಗುತ್ತಿದೆ ಎಂಬುದನ್ನು ಇದು ಹೇಳುತ್ತಿದೆ’ ಎಂದು ಎಎಂಎಫ್‌ಐ ಅಭಿಪ್ರಾಯಪಟ್ಟಿದೆ. ಎಸ್‌ಐಪಿ ಮೂಲಕ ಮಾಡುವ ಹೂಡಿಕೆಗಳ ಪ್ರಮಾಣವು ಐದು ವರ್ಷಗಳಲ್ಲಿ ದುಪ್ಪಟ್ಟಾಗಿದೆ. 2016–17ರಲ್ಲಿ ₹ 43 ಸಾವಿರ ಕೋಟಿ ಹೂಡಿಕೆ ಆಗಿತ್ತು.

ಮಾರ್ಚ್‌ ಅಂತ್ಯದ ವೇಳೆಗೆ ಎಸ್‌ಐಪಿಗಳ ಮೂಲಕ ಆಗಿರುವ ಹೂಡಿಕೆಯ ಮೊತ್ತವು ₹ 5.76 ಲಕ್ಷ ಕೋಟಿ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು