ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ದಿನದಲ್ಲಿ ಹೂಡಿಕೆದಾರರ ಸಂಪತ್ತು ₹8 ಲಕ್ಷ ಕೋಟಿ ಹೆಚ್ಚಳ

Published 15 ಡಿಸೆಂಬರ್ 2023, 15:38 IST
Last Updated 15 ಡಿಸೆಂಬರ್ 2023, 15:38 IST
ಅಕ್ಷರ ಗಾತ್ರ

ನವದೆಹಲಿ: ಮುಂಬೈ ಷೇರು ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ ಮೊದಲ ಬಾರಿಗೆ ಶುಕ್ರವಾರ 71 ಸಾವಿರ ಅಂಶಗಳನ್ನು ದಾಟಿದೆ. ಮೂರು ದಿನದಲ್ಲಿ ಹೂಡಿಕೆದಾರರು ₹8.11 ಲಕ್ಷ ಕೋಟಿ ಲಾಭ ಗಳಿಸಿದ್ದಾರೆ.

ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್‌ ತನ್ನ ಬಡ್ಡಿದರ ಪರಿಷ್ಕರಣೆ ಮಾಡಿಲ್ಲ. ಜತೆಗೆ, ಮುಂದಿನ ವರ್ಷ ಬಡ್ಡಿದರ ಕಡಿತದ ಸೂಚನೆಯನ್ನು ನೀಡಿದೆ. ಇದು ಈಕ್ವಿಟಿ ಮಾರುಕಟ್ಟೆಗಳಿಗೆ ನಿರಂತರ ವಿದೇಶಿ ನಿಧಿಯ ಒಳಹರಿವು ಮತ್ತು ಷೇರುಗಳ ಏರಿಕೆಗೆ ಉತ್ತೇಜನ ನೀಡಿದೆ.

ಮೂರನೇ ದಿನದ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ 969 ಅಂಶ ಏರಿಕೆಯಾಗಿ ಗರಿಷ್ಠ ಮಟ್ಟವಾದ 71,483 ತಲುಪಿ ಅಂತ್ಯಗೊಂಡಿತು. ವಹಿವಾಟಿನ ವೇಳೆ 1,091 ಅಂಶ ಏರಿಕೆಯಾಗಿ 71,605 ತಲುಪಿತ್ತು. 

ಮೂರು ದಿನದಲ್ಲಿ ಬಿಎಸ್‌ಇ 1,932 ಅಂಶ ಏರಿಕೆ ಕಂಡಿದೆ. ಬಿಎಸ್‌ಇಯಲ್ಲಿ ನೋಂದಾಯಿತ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣ (ಎಂ–ಕ್ಯಾಪ್‌) ₹357 ಲಕ್ಷ ಕೋಟಿಗೆ ತಲುಪಿ, ಹೊಸ ದಾಖಲೆ ಬರೆದಿದೆ.

ಎಚ್‌ಸಿಎಲ್‌ ಟೆಕ್ನಾಲಜೀಸ್‌ ಹೆಚ್ಚು ಗಳಿಕೆ (ಶೇ 5.58) ಕಂಡಿದೆ. ನಂತರದ ಸ್ಥಾನದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌, ಇನ್ಪೊಸಿಸ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಟಾಟಾ ಸ್ಟೀಲ್‌, ಎನ್‌ಟಿಪಿಸಿ, ಟೆಕ್‌ ಮಹೀಂದ್ರ ಮತ್ತು ವಿಪ್ರೊ ಗಳಿಕೆ ಕಂಡಿವೆ. ನೆಸ್ಟ್ಲೆ, ಭಾರ್ತಿ ಏರ್‌ಟೆಲ್‌, ಮಾರುತಿ ಮತ್ತು ಐಟಿಸಿ ಇಳಿಕೆ ಕಂಡಿವೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಕೂಡ ವಹಿವಾಟಿನಲ್ಲಿ 274 ಅಂಶ ಏರಿಕೆಯಾಗಿ, 21,456 ತಲುಪಿತು.

ಚಿನ್ನ ₹150 ಬೆಳ್ಳಿ ₹700 ಏರಿಕೆ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನದ ದರ 10 ಗ್ರಾಂ.ಗೆ ₹150 ಏರಿಕೆಯಾಗಿ ₹63100ರಂತೆ ಮಾರಾಟವಾಯಿತು. ಬೆಳ್ಳಿ ಧಾರಣೆ ಕೆ.ಜಿಗೆ ₹700 ಹೆಚ್ಚಳವಾಗಿ ₹78100 ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಆಗಿದ್ದರಿಂದ ದೇಶೀಯ ಮಾರುಕಟ್ಟೆಯಲ್ಲೂ ಬೆಲೆ ಏರಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್‌ ಗಾಂಧಿ ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಒಂದು ಔನ್ಸ್‌ಗೆ (28.34 ಗ್ರಾಂ.) 2037 ಡಾಲರ್‌ ಮತ್ತು ಬೆಳ್ಳಿ ಒಂದು ಔನ್ಸ್‌ಗೆ 24.19 ಡಾಲರ್‌ನಂತೆ ಮಾರಾಟ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT