ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರಿಗೆ ಒಂದೇ ದಿನ ₹2.91 ಲಕ್ಷ ಕೋಟಿ ನಷ್ಟ

Published 8 ಜನವರಿ 2024, 16:33 IST
Last Updated 8 ಜನವರಿ 2024, 16:33 IST
ಅಕ್ಷರ ಗಾತ್ರ

ನವದೆಹಲಿ: ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ ಸೋಮವಾರ ಇಳಿಕೆ ಕಂಡಿದ್ದರಿಂದ ಹೂಡಿಕೆದಾರರ ಸಂಪತ್ತು ₹2.91 ಲಕ್ಷ ಕೋಟಿ ಕರಗಿತು.

ಸೆನ್ಸೆಕ್ಸ್‌ 670 ಅಂಶ ಇಳಿದು, 71,355ಕ್ಕೆ ಸ್ಥಿರಗೊಂಡಿತು. 

‘ಹೂಡಿಕೆದಾರರ ಚಿತ್ತವು ಏಷ್ಯನ್ ಮತ್ತು ಯುರೋಪಿಯನ್ ಮಾರುಕಟ್ಟೆಯತ್ತ ಹೊರಳಿತು. ಮತ್ತೊಂದೆಡೆ ಅಮೆರಿಕ ಬಾಂಡ್‌ನ ಮೌಲ್ಯವು ಶೇ 4ರಷ್ಟು ವೃದ್ಧಿಸಿತು. ಈ ಅಂಶಗಳೇ ಮುಂಬೈ ಷೇರು‍ಪೇಟೆಯಲ್ಲಿ ಕುಸಿತಕ್ಕೆ ಕಾರಣವಾಗಿವೆ’ ಎಂದು ಮೆಹ್ತಾ ಈಕ್ವಿಟೀಸ್ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ (ಸಂಶೋಧನೆ) ಪ್ರಶಾಂತ್ ತಾಪ್ಸೆ ಹೇಳಿದ್ದಾರೆ.

ಎಸ್‌ಬಿಐ, ಐಟಿಸಿ, ನೆಸ್ಟ್ಲೆ, ಏಷ್ಯನ್‌ ಪೇಂಟ್ಸ್‌, ಟೆಕ್‌ ಮಹೀಂದ್ರ, ಮಹೀಂದ್ರ ಆ್ಯಂಡ್‌ ಮಹೀಂದ್ರ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ಮತ್ತು ಹಿಂದೂಸ್ತಾನ್‌ ಯೂನಿಲಿವರ್‌ ನಷ್ಟ ಕಂಡಿವೆ. ಎಚ್‌ಸಿಎಲ್‌ ಟೆಕ್ನಾಲಜೀಸ್‌, ಎನ್‌ಟಿಪಿಸಿ, ಸನ್‌ ಫಾರ್ಮಾ, ಪವರ್‌ಗ್ರಿಡ್‌, ಬಜಾಜ್‌ ಫೈನಾನ್ಸ್‌ ಮತ್ತು ಭಾರ್ತಿ ಏರ್‌ಟೆಲ್‌ ಲಾಭ ದಾಖಲಿಸಿವೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 197 ಅಂಶ ಕುಸಿದು, 21,513ಕ್ಕೆ ವಹಿವಾಟು ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT