ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹110 ಕೋಟಿ ಸಂಗ್ರಹಿಸಿದ ಇನ್‌ವಿಡಿಯೊ

Last Updated 27 ಅಕ್ಟೋಬರ್ 2020, 11:36 IST
ಅಕ್ಷರ ಗಾತ್ರ

ನವದೆಹಲಿ: ಹೂಡಿಕೆದಾರರಿಂದ ₹ 110 ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ವಿಡಿಯೊ ಎಡಿಟಿಂಗ್ (ಸಂಪಾದನೆ) ವೇದಿಕೆಯಾಗಿರುವ ಇನ್‌ವಿಡಿಯೊ (InVideo) ಕಂಪನಿ ಮಂಗಳವಾರ ಹೇಳಿಕೊಂಡಿದೆ.

ಸೀಕ್ವಿಯಾ ಕ್ಯಾಪಿಟಲ್‌ ಇಂಡಿಯಾ, ಟೈಗರ್‌ ಗ್ಲೋಬಲ್‌, ಹಮ್ಮಿಂಗ್‌ಬರ್ಡ್‌, ಆರ್‌ಟಿಪಿ ಗ್ಲೋಬಲ್‌ ಮತ್ತು ಬೇಸ್‌ ಕಂಪನಿಗಳು ಮೊದಲ ಹಂತದಲ್ಲಿ ಹೂಡಿಕೆ ಮಾಡಿವೆ ಎಂದು ಇನ್‌ವಿಡಿಯೊ ತಿಳಿಸಿದೆ.

ವಿಶ್ವದರ್ಜೆಯ ತಾಂತ್ರಿಕ ಪರಿಹಾರಗಳನ್ನು ಒದಗಿಸಲು, ವ್ಯಕ್ತಿಗಳಿಗೆ ಹಾಗೂ ಉದ್ದಿಮೆಗಳಿಗೆ ಅಗತ್ಯಕ್ಕೆ ತಕ್ಕಂತೆ ವಿಡಿಯೊ ಸೃಷ್ಟಿಗೆ ನೆರವಾಗಲು ಈ ಬಂಡವಾಳ ಬಳಸಿಕೊಳ್ಳಲಾಗುವುದು ಎಂದು ಇನ್‌ವಿಡಿಯೊ ಸಹ ಸ್ಥಾಪಕ ಸಂಕೇತ್‌ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2019ರ ಏಪ್ರಿಲ್‌ನಲ್ಲಿ ಬಿಡುಗಡೆ ಆಗಿದ್ದು, ಇಲ್ಲಿಯವರೆಗೆ 150 ದೇಶಗಳಲ್ಲಿ 8 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಹೊಂದಿರುವುದಾಗಿ ಅದು ಹೇಳಿಕೊಂಡಿದೆ. 75ಕ್ಕೂ ಹೆಚ್ಚಿನ ಭಾಷೆಗಳಲ್ಲಿ ವಿಡಿಯೊ ಸೃಷ್ಟಿಯಾಗಿದೆ ಎಂದೂ ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT