ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತೀಯ ರೈಲ್ವೆ ಹಣಕಾಸು ನಿಗಮದ ಲಾಭ ಶೇ 34ರಷ್ಟು ಏರಿಕೆ

Published 20 ಮೇ 2024, 15:37 IST
Last Updated 20 ಮೇ 2024, 15:37 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ರೈಲ್ವೆ ಹಣಕಾಸು ನಿಗಮ (ಐಆರ್‌ಎಫ್‌ಸಿ) 2023–24ರ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹1,717 ಕೋಟಿ ಲಾಭ ಗಳಿಸಿದೆ.

2022–23ರ ಇದೇ ತ್ರೈಮಾಸಿಕದಲ್ಲಿ ₹1,285 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈಗ ಲಾಭದ ಪ್ರಮಾಣವು ಶೇ 34ರಷ್ಟು ಏರಿಕೆಯಾಗಿದೆ ಎಂದು ಷೇರುಪೇಟೆಗೆ ಕಂಪನಿ ಸೋಮವಾರ ತಿಳಿಸಿದೆ.

ಒಟ್ಟು ವರಮಾನವು ₹6,230 ಕೋಟಿಯಿಂದ ₹6,477 ಕೋಟಿಗೆ ಏರಿಕೆಯಾಗಿದೆ. ವೆಚ್ಚವು ₹4,945 ಕೋಟಿಯಿಂದ ₹4,760 ಕೋಟಿಗೆ ಇಳಿದಿದೆ. ಕಂಪನಿಯ ಮಂಡಳಿಯು ಪ್ರತಿ ಷೇರಿಗೆ 70 ಪೈಸೆ ಲಾಭಾಂಶ ನೀಡಲು ಅನುಮೋದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT